ಜವನೆರ್ ಬೆದ್ರ ಫೌಂಡೇಶನ್ ನೇತೃತ್ವದಲ್ಲಿ 8ನೇ ವರ್ಷದ ದೀಪಾವಳಿ ಸಂಭ್ರಮದ ಪ್ರಯುಕ್ತ ಯೋಧ ನಮನ, ಗೋ ಪೂಜೆ ಕಾರ್ಯಕ್ರಮ.!

0
19

ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್(ರಿ) ನೇತೃತ್ವದಲ್ಲಿ 8ನೇ ವರ್ಷದ ದೀಪಾವಳಿ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ದಿನಾಂಕ ೧೯-೧೦-೨೦೨೫ರ ಅದಿತ್ಯವಾರ ಸಂಜೆ ೪ ಗಂಟೆಗೆ ಸಂಘಟನೆಯ ಪ್ರಮುಖರಾದ ದಿನೇಶ್ ನಾಯ್ಕ್ ಅವರ ಗಾಂಧಿ ನಗರದಲ್ಲಿರುವ ಮನೆಯಲ್ಲಿ ನಡೆಯಿತು. ಕಳೆದ ಏಳು ವರ್ಷದಿಂದ ಜವನೆರ್ ಬೆದ್ರ ಸಂಘಟನೆ ದೀಪಾವಳಿ ಹಬ್ಬದ ಪ್ರಯುಕ್ತ ಯೋಧ ನಮನ, ಗೋ ಪೂಜೆ, ಕುಟುಂಬ ಸಮ್ಮಿಲನದಂತಹ ಅರ್ಥ ಪೂರ್ಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಆ ಪ್ರಯುಕ್ತ ಈ ಬಾರಿಯೂ ಎಂಟನೇ ವರ್ಷದ ದೀಪಾವಳಿ ಸಂಭ್ರಮ ಎಂಬ ಹೆಸರಿನಲ್ಲಿ ಕಾರ್ಯಕ್ರಮವೂ ವಿಶೇಷವಾಗಿ ನಡೆಯಿತು.

ಯೋಧ ತಿಲಕ್ ಎಸ್ ಪಿ’ಗೆ ಯೋಧ ನಮನ ಗೌರವ:
ಯೋಧರು ಹಾಗೂ ರೈತರು ನಿಜವಾದ ಹಿರೋಗಳು ಎಂಬುದು ನಮಗೆ ಪ್ರಮುಖವಾಗಿ ತಿಳಿದಿರಬೇಕಾಗಿರುವ ಸತ್ಯ. ನಾಡಿನಲ್ಲಿರುವ ರೈತರು ನಮ್ಮ ಹೊಟ್ಟೆಯನ್ನು ತುಂಬಿಸುವ ಕೆಲಸ ಮಾಡಿದರೆ, ಗಡಿಯಲ್ಲಿರುವ ಯೋಧರು ಶತ್ರುಗಳ ಗುಂಡಿಗೆ ಎದೆಕೊಟ್ಟು ನಾವುಗಳು ನೆಮ್ಮದಿಯಿಂದಿರುವಂತೆ ಕಾಯುತ್ತಾನೆ. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ತಮ್ಮವರ ರಕ್ಷಣೆ ಮಾಡುವ ಯೋಧರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿರಬೇಕು. ಆ ನಿಟ್ಟಿನಲ್ಲಿ ಜವನೆರ್ ಬೆದ್ರ ಫೌಂಡೇಶನ್ ‘ಯೋಧ ನಮನ’ ಎಂಬ ಬಹಳ ಅರ್ಥಪೂರ್ಣ ಕಾರ್ಯಕ್ರಮವೊಂದನ್ನು ಆರಂಭಿಸಿದ್ದು ಎಲ್ಲಾರ ಮೆಚ್ಚುಗೆಯನ್ನು ಪಡೆದಿರುವ ಕಾರ್ಯಕ್ರಮಗಳಲ್ಲಿ ಒಂದು. ಪ್ರಧಾನಿ ನರೇಂದ್ರ ಮೋದಿ ಗಡಿಯಲ್ಲಿ ಯೋಧರ ಜೊತೆಗೆ ದೀಪಾವಳಿ ಹಬ್ಬವನ್ನು ಆಚರಿಸುವ ಮೂಲಕ ಯೋಧರಿಗೆ ಆತ್ಮಸ್ಥೈರ್ಯ ಹಾಗೂ ನೈತಿಕ ಬೆಂಬಲವನ್ನು ಸೂಚಿಸುವ ಕೆಲಸ ಮಾಡುತ್ತಿರುವುದು ಮತ್ತೊಂದು ವಿಶೇಷ.

ಈ ಬಾರಿಯ ಯೋಧ ನಮನ ಕಾರ್ಯಕ್ರಮದಲ್ಲಿ ದೇಶ ಕಂಡಂತಹ ಪ್ರಮುಖ ಮಿಲಿಟರಿ Operation ಗಳಾದ Surgical Strike, Balakot Air Strike ಮತ್ತು Operation Sindoor ಸಮಯದಲ್ಲಿ ದೇಶ ಸೇವೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿರುವ ತಿಲಕ್ ಎಸ್ ಪಿ’ಗೆ ಈ ಬಾರಿಯ ಯೋಧ ನಮನದ ಗೌರವವನ್ನು ಸಲ್ಲಿಸಲಾಯಿತು.

ಕುಟುಂಬ ಸಮ್ಮಿಲನ, ಗೋ ಪೂಜಾ, ಯುವ ಸಂಘಟನೆ ಹಾಗೂ ಮಹಿಳಾ ಘಟಕ ಬ್ರಿಗೇಡ್ 2025 26ನೇ ಸಾಲಿನ ಪದಗ್ರಹಣ:
ಯೋಧ ನಮನ ಕಾರ್ಯಕ್ರಮದ ಜೊತೆಗೆ ಕುಟುಂಬ ಸಮ್ಮಿಲನದಂತಹ ಸ್ನೇಹಕೂಟದಂತಹ ಕಾರ್ಯಕ್ರಮ ಹಾಗೂ ಗೋ ಪೂಜಾ ಕಾರ್ಯಕ್ರಮವೂ ನಡೆಯಿತು. ಇದರ ಜೊತೆಗೆ ೨೦೨೫-೨೬ ಸಾಲಿನ ಯುವ ಸಂಘಟನೆ ಹಾಗೂ ಮಹಿಳಾ ಘಟಕ ಬ್ರಿಗೇಡ್ ಪದಗ್ರಹಣವೂ ನಡೆಯಿತು.

ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘಟನೆಯ ಸ್ಥಾಪಕಧ್ಯಕ್ಷಾರದ ಅಮರ್ ಕೋಟೆ ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಸಂಘಟನೆಯ ಗೌರವ ಸಲಹೆಗಾರರಾದ ಶ್ರೀ ಗುರುಪ್ರಸಾದ್ ಹೊಳ್ಳ, ರಾಜೇಂದ್ರ ಜಿ, ಅಶ್ವಿತ, ಪುರಸಭಾ ಸದಸ್ಯರಾದ ಮಮತಾ ರಾವ್ ,ದಿನೇಶ್ ನಾಯಕ್, ನಾರಾಯಣ ಪಡುಮಲೆ , ರಂಜಿತ್ ಶೆಟ್ಟಿ, ಸಹನಾ ನಾಯಕ್ ಮತ್ತಿತರರು ಭಾಗಿಯಾಗಿದ್ದರು. ಸಂದೀಪ್ ಕೆಳಪುತ್ತಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.

ಜವನೆರ್ ಬೆದ್ರ ಸಂಘಟನೆಯ ಕಾರ್ಯದರ್ಶಿ ದಿನೇಶ್ ನಾಯಕ್ ಅವರ ಮನೆಯಲ್ಲಿ ಕಾರ್ಯಕ್ರಮ ನಡೆಯಿತು. ಸಾಂಪ್ರದಾಯಿಕ ತುಡರ್, ಗೋಪೂಜೆ, ಪಟಾಕಿ, ಹಾಗೂ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಿ ದೀಪಾವಳಿ ಆಚರಿಸಿದರು.

LEAVE A REPLY

Please enter your comment!
Please enter your name here