ವರದಿ ರಾಯಿ ರಾಜ ಕುಮಾರ
ಕಾರ್ಕಳ ತಾಲೂಕು ಕುಲಾಲ ಸುಧಾರಕ ಸಂಘದ 30ನೇ ವಾರ್ಷಿಕ ಮಹಾಸಭೆ ಜೋಡು ರಸ್ತೆ ಕುಲಾಲ ಸಭಾಭವನದಲ್ಲಿ ಅಕ್ಟೋಬರ್ 19ರಂದು ನಡೆಯಿತು. ಅಧ್ಯಕ್ಷ ಹರಿಶ್ಚಂದ್ರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಸತೀಶ್ ಕುತ್ಯಾರು ದಿಕ್ಸೂಚಿ ಭಾಷಣ ಮಾಡಿದರು. ಸರ್ವಜ್ಞ ವೃತ್ತದ ನಿರ್ಮಾಣಕ್ಕೆ ಕಾರಣಕರ್ತರಾದ ಗೌರವಾಧ್ಯಕ್ಷ ಭೋಜ ಕುಲಾಲ್ ಬೆಳ್ಳಂಜೆ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ನಾಲ್ಕು ಮಂದಿ ಇತರ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಹೃದಯ ಕುಲಾಲ್ ಅವರು ವರದಿ ವಾಚಿಸಿದರು. ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ವಲಯ ಅರಣ್ಯ ಅಧಿಕಾರಿ ಪ್ರಭಾಕರ ಕುಲಾಲ್ ದೀಪ ಬೆಳಗಿ ಉದ್ಘಾಟನೆಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಉದ್ಯಮಿ ಭಾಸ್ಕರ್ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ವಿನಯ ಕುಲಾಲ್, ದಿವಾಕರ ಮೂಲ್ಯ ಹಾಜರಿದ್ದರು.
ಇದೇ ಸಂದರ್ಭದಲ್ಲಿ ನಡೆದ ಕುಣಿಯೋಣು ಬಾರ ಕುಂಬಾರ ನೃತ್ಯ ಸ್ಪರ್ಧೆಯ ಪ್ರಥಮ ಬಹುಮಾನವನ್ನು ಹಿರ್ಗಾನ ತಂಡ, ದ್ವಿತೀಯ ಇರ್ವತ್ತೂರು ತಂಡ, ತೃತೀಯ ಅಜೆಕಾರು ತಂಡ, ಚತುರ್ಥ ಹೊಸ್ಮಾರು ತಂಡಗಳು ಪಡೆದುಕೊಂಡವು. ತೀರ್ಪುಗಾರರಾಗಿ ಆಗಮಿಸಿದ್ದ ಮೂಡುಬಿದಿರೆ ಹೆಸರಾಂತ ಟ್ಯಾಲೆಂಟ್ಸ್ ನೃತ್ಯ ತಂಡದ ನಿರ್ವಾಹಕ ರಾಜೇಶ್ ಭಟ್ ಈ ಸಂಧರ್ಭದಲ್ಲಿ ಹಾಜರಿದ್ದು ಬಹುಮಾನವನ್ನು ವಿತರಿಸಿದರು.
ಇರ್ವತ್ತೂರು ಶ್ವೇತಾ ಕುಲಾಲ್ ಪ್ರಾರ್ಥಿಸಿದರು. ದಿವಾಕರ ಬಂಗೇರ ಸ್ವಾಗತಿಸಿದರು. ಹೊಸ್ಮಾರು ಸತೀಶ್ ಕಾರ್ಯಕ್ರಮ ನಿರ್ವಹಿಸಿದರು. ದಿವಾಕರ ಕುಲಾಲ್ ವಂದಿಸಿದರು.
.