ಗ್ರಾಮ ಪಂಚಾಯತ್ ಉಪ್ಪುಂದ ಘನ ಮತ್ತು ದ್ರವ ತ್ಯಾಜ್ಯ ಘಟಕ(ಎಸ್.ಎಲ್.ಆರ್.ಎಮ್) ಉಪ್ಪುಂದ ಲಕ್ಷ್ಮೀ ಪೂಜೆ ಸಂಭ್ರಮ ನಡೆಯಿತು.
ಇಂದು ಬೆಳಿಗ್ಗೆ ಶ್ರೀ ದೇವರಿಗೆ ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರ ದೀಪಾಲಂಕಾರ ಮತ್ತು ಹಣ್ಣುಗಳು, ಸಿಹಿ ತಿಂಡಿಗಳು ಮತ್ತು ದಾಳಿಂಬೆ, ತೆಂಗಿನಕಾಯಿ ಮತ್ತು ಕಮಲದಂತಹ ಹೂವುಗಳು ಲಕ್ಷ್ಮಿಗೆ ಹೆಚ್ಚು ಪ್ರಿಯವಾದ ನೈವೇದ್ಯಗಳಾಗಿವೆ. ಈ ಸಮರ್ಪಣೆಗಳ ಜೊತೆಗೆ, ಲಕ್ಷ್ಮಿ ಮಂತ್ರಗಳನ್ನು ಪಠಿಸುವುದು ಮತ್ತು ವಿಶೇಷ ಪೂಜೆ ಸಂಭ್ರಮದಲ್ಲಿ ನಡೆಯಿತು
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ಚಂದ್ರ ಉಪ್ಪುಂದ ಅವರು ಮಾತನಾಡಿ ಎಸ್.ಎಲ್.ಆರ್.ಎಮ್ ಘಟಕದಲ್ಲಿ ಇದು ಮೂರನೇ ವರ್ಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಇದರ ಪ್ರಮುಖ ಉದ್ದೇಶ ನಾವೆಲ್ಲರೂ ಒಂದೇ ಮತ್ತು ಪ್ರತಿಯೊಂದು ಕೆಲಸದಲ್ಲಿ ಕೂಡ ದೇವರನ್ನು ಕಾಣಬಹುದು ಅದೇ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸಿಹಿ ತಿಂಡಿಗಳನ್ನು ಮತ್ತು ಹೊಸ ಬಟ್ಟೆಯನ್ನು ನೀಡಲಾಯಿತು ಹಾಗೆ ದೀಪಾವಳಿ ಪ್ರತಿಯೊಬ್ಬರ ಜೀವನದಲ್ಲಿ ಒಳಿತನ್ನು ಮಾಡಲಿ ಎಂದರು..
ಈ ಸಂದರ್ಭದಲ್ಲಿ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯತ್ ಉಪ್ಪುಂದ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಗ್ರಾಮ ಪಂಚಾಯತ್ ಉಪ್ಪುಂದ
ಮೇಲ್ವಿಚಾರಕರು ಮತ್ತು ಸದಸ್ಯರು ಎಸ್, ಎಲ್, ಆರ್, ಎಮ್, ಘಟಕ ಗ್ರಾಮ ಪಂಚಾಯಿತಿ ಉಪ್ಪುಂದ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.