ನವoಬರ್ 4 ರ ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಭರದ ಸಿದ್ಧತಾ ಸಭೆ.

0
48

ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಇದರ 35 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮವು 2025 ನವಂಬರ್ 4 ಮಂಗಳವಾರದಂದು ಬೆಳಗ್ಗೆ 10.00 ಕ್ಕೆ ಧ್ವಜಾರೋಹಣ, ಶಿವರಾಮ ಕಾಸರಗೋಡು 60 ಫೋಟೋ ಗ್ಯಾಲರಿ ಉದ್ಘಾಟನೆ ,ಕಾಸರಗೋಡು ಕರ್ನಾಟಕದೊಂದಿಗೆ
ವಿಲೀನೀಕರಣಕ್ಕಾಗಿ ಹೋರಾಡಿದ 60 ಮಂದಿ ಕನ್ನಡ ಸತ್ಯಾಗ್ರಹಿಗಳ, ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪ ನಮನ, ನುಡಿ ನಮನ ನಡೆಯಲಿದೆ.
ಬೆಳಿಗ್ಗೆ 11 .00 ಕ್ಕೆ ಕೇರಳ ಕರ್ನಾಟಕ ಕನ್ನಡ ರಾಜ್ಯೋತ್ಸವ ಕಾಸರಗೋಡು ಕನ್ನಡ ಗ್ರಾಮೋತ್ಸವದ ಉದ್ಘಾಟನೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷ ಡಾ. ಸಿ. ಸೋಮಶೇಖರ ( ಐ ಎ ಎಸ್ ನಿವೃತ್ತ) ಅವರು ಸರ್ವಾಧ್ಯ ಕ್ಷತೆಯನ್ನು ವಹಿಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ ಪ್ರಸಾರಾಂಗ ದ ವತಿಯಿಂದ ಬಹು ಸಂಸ್ಕೃತಿಯ ಕಾಸರಗೋಡು- ರಾಜ್ಯ ಮಟ್ಟದ ವಿಚಾರಗೋಷ್ಠಿ ,ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ, ಕಾಸರಗೋಡು ಕನ್ನಡಿಗ- ಗಡಿನಾಡು ಹೊರನಾಡು ಕನ್ನಡಿಗ -ಕರ್ನಾಟಕ ಸರಕಾರ- ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಸಂಜೆ ಗಂಟೆ 4 .00 ಕ್ಕೆ ಶಿವರಾಮ ಕಾಸರಗೋಡು 60 ನೇ ಜನ್ಮ ದಿನಾಚರಣೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾಸರಗೋಡು ಕನ್ನಡ ಗ್ರಾಮಡಲ್ಲಿ ಗೋ – ಕುಟೀರಕ್ಕೆ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಜೆ. ಕೃಷ್ಣ ಪಾಲೆಮಾರ್ (ಮಾಜಿ ಸಚಿವರು, ಕರ್ನಾಟಕ ಸರಕಾರ) ವಹಿಸಲಿದ್ದಾರೆ .ಮುಖ್ಯ ಅತಿಥಿಗಳಾಗಿ ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು, ವಾಟಾಳ್ ನಾಗರಾಜ್ ಬೆಂಗಳೂರು, ಸಿ .ಎನ್ ಅಶೋಕ ಚನ್ನರಾಯಪಟ್ಟಣ (ಅಧ್ಯಕ್ಷರು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು), ಡಾ. ಎo. ಜಿ .ಆರ್ ಅರಸ್ (ಪ್ರಧಾನ ಸಂಚಾಲಕರು ಚುಟುಕು ಸಾಹಿತ್ಯ ಪರಿಷತ್, ಮೈಸೂರು) ವಿಶ್ವ ರಾಮಕ್ಷತ್ರಿಯ ಮಹಾ ಸಂಘದ ಅಧ್ಯಕ್ಷ ಎಚ್. ಆರ್ ಶಶಿಧರ್ ನಾಯ್ಕ್, ಟಿ.ಎಂ ಶಾಹಿದ್ ತೆಕ್ಕಿಲ್, ಗೋಪಾಲಕೃಷ್ಣ ಕೂಡ್ಲು (ಅಧ್ಯಕ್ಷರು, ಮಧೂರು ಗ್ರಾಮ ಪಂಚಾಯತು) ಮುಂತಾದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ 60 ಮಂದಿ ಕನ್ನಡದ ಸಾಧಕರಿಗೆ ‘ ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಕಾಸರಗೋಡು ಕನ್ನಡ ಗ್ರಾಮೋತ್ಸವ ಪ್ರಶಸ್ತಿ ಪ್ರದಾನ ನಡೆಯಲಿದೆ. ಸುಮಾರು 60 ಕಲಾವಿದರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವಿದೆ.
ಕಾಸರಗೋಡು ಕನ್ನಡ ಗ್ರಾಮದಲ್ಲಿ ನಡೆದ ಸಿದ್ಧತಾ ಸಭೆಯ ಅಧ್ಯಕ್ಷತೆಯನ್ನು ಕಾಸರಗೋಡು ನಗರಸಭಾ ಕೌನ್ಸಿಲರ್ ಶ್ರೀಮತಿ ಶಾರದಾ .ಬಿ ವಹಿಸಿದ್ದರು . ಶಿವರಾಮ ಕಾಸರಗೋಡು, ಕೆ .ಎನ್ ವೆಂಕಟ್ರಮಣ ಹೊಳ್ಳ, ಕೆ .ನಿರಂಜನ ಕೊರಕ್ಕೋಡು, ರಾಧಾಕೃಷ್ಣ.ಕೆ ಉಳಿಯತ್ತಡ್ಕ, ಜಯಾನಂದ ಕುಮಾರ್ ಹೊಸದುರ್ಗ, ಕೆ. ಗುರುಪ್ರಸಾದ್ ಕೋಟೆಕಣಿ, ಕೆ. ಮುರಳೀಧರ ಪಾರೆಕಟ್ಟೆ, ಕೆ . ಜಗದೀಶ ಕೂಡ್ಲು,ಯೋಗೀಶ್ ಕೋಟೆಕಣಿ, ಶ್ವೇತಾ ಯೋಗೀಶ್, ನಾರಾಯಣ ನಾಯ್ಕ್ ಪೆರ್ನೆ , ಕುಶಲ ಕುಮಾರ್. ಕೆ ಕನ್ನಡ ಗ್ರಾಮ, ಶ್ರೀಕಾಂತ್ ಕಾಸರಗೋಡು, ಉಪಸ್ಥಿತರಿದ್ದರು .

LEAVE A REPLY

Please enter your comment!
Please enter your name here