ಕಾಸರಗೋಡು : ಕಾಸರಗೋಡು ಕೋಟೆ ಭಾಗಿಲಿನಲ್ಲಿರುವ, ಪಳ್ಳದ ಕೊಟ್ಯ ಶ್ರೀ ಧೂಮಾವತಿ, “ದೀಪಾವಳಿ ನೆಮೋತ್ಸವ “ನಾಗರಕಟ್ಟೆಯ, ಕಾಸರಗೋಡು ಕೋಟೆ ಬಾಗಿಲಿನಲ್ಲಿ ಸಮಸ್ತ ಜನ ಸಮುದಾಯದ ಓಗ್ಗೋಡುವಿಕೆಯಲ್ಲಿ ಸಂಪನ್ನವಾಯಿತು. ಪಳ್ಳದ ಕೊಟ್ಯ ತರವಾಡಿನಿಂದ ಬಂದ ಬಂಡಾರ ಮೆರವಣಿಗೆ, ಗುಳಿಗನ ಕೋಲ, 20.10.2025,ರಂದು ನಡೆದ ಧೂಮಾವತಿ ರಾಜನ್ ದೈವ ಕೋಲ, ಊರವರ ಸಹಕಾರದಲ್ಲಿ, ಕಾಸರಗೋಡು ಕೋಟೆ ನಾಯಕರ ಮನೆ ವಂಶಸ್ತರ ನೇತೃತ್ವದಲ್ಲಿ ವಿಜೃಂಭಣೆ ಯಿಂದ ನಡೆಯಿತು. ಉತ್ಸವ ಸಮಿತಿ ಸಹಕರಿಸಿದ ಸಕಲರೀಗೆ ಧನ್ಯವಾದ ಸಮರ್ಪಸಿದೆ.