ಲಯನ್ಸ್ ಕ್ಲಬ್ ಅಲಂಗಾರು – ಸೇವಾ ಕಾರ್ಯಕ್ರಮ-74 (2025-26)ನಡೆಯಿತು. ಒಂದು ಸುಂದರ ಸಂಜೆಯನ್ನು ಸಹೋದರಿ ರೇವತಿ ಆಚಾರ್ಯ ಇವರ ಮನೆಯಲ್ಲಿ ದೀಪಾವಳಿ ಆಚರಣೆಯೊಂದಿಗೆ ಕಳೆದ ಸಂತೋಷ ನಮ್ಮದು.
ನಾವು ಲಯನ್ ಸದಸ್ಯರು ಹಾಗೂ ಲಯನ್ಸ್ ಕುಟುಂಬದ ಮಕ್ಕಳೊಂದಿಗೆ ಸಂಜೆ ಸುಮಾರು ಏಳರ ಹೊತ್ತಿಗೆ ಸಹೋದರಿ ರೇವತಿಯವರ ಮನೆ ಸೇರಿದೆವು. ಮನೆಯ ಮುಂದೆ ಎಲ್ಲೆಡೆ ದೀಪ ಹಚ್ಚಿದ ನಂತರ ಅಧ್ಯಕ್ಷರ ಪ್ರಸ್ತಾವನೆಯ ಮಾತುಗಳು. ದೀಪಾವಳಿ ಉಡುಗೊರೆ ಜೊತೆ ತಿಂಗಳ ದಿನಸಿ ಸಾಮಾಗ್ರಿಗಳನ್ನು ರೇವತಿಯವರಿಗೆ ನೀಡಲಾಯಿತು. ನಂತರ ಸಿಹಿ ಹಂಚಿ, ಪಟಾಕಿ ಸುಟ್ಟು ರೇವತಿ ಅಕ್ಕ ಜೊತೆ ನಾವೆಲ್ಲ ಸಂಭ್ರಮಿಸಿದೆವು.
ಒಬ್ಬಂಟಿಯಾಗಿ ವಾಸಿಸುವ ರೇವತಿಯವರ ಮನೆಯಲ್ಲಿ ಏನಿದು ದೀಪಾವಳಿ ಸಂಭ್ರಮ ಎಂದು ಅಕ್ಕಪಕ್ಕದವರು ಅಂದುಕೊಂಡಿರಬಹುದು. ಆದರೆ ಅಲ್ಲಿ ತೆರಳಿದ ನಮಗೆ ನೋಡಲು ಸಿಕ್ಕಿದ್ದು ಸಹೋದರಿಯ ಮುಖದಲ್ಲಿನ ನಗು, ಸಂಭ್ರಮ.
ರೇವತಿಯವರ ಮನೆ ಅಂಗಳದಲ್ಲಿ ಪ್ರಜ್ವಲಿಸಿದ ಬೆಳಕು ಅವರ ಬಾಳಲ್ಲೂ ಬೆಳಗಲಿ ಎಂದು ಬೇಡುತ್ತಾ ವಿದಾಯ ಹೇಳಿದೆವು. ಲಯನ್ ಅಮಿತ್ ಡಿಸಿಲ್ವ, ಲಯನ್ ರಾಜಾ ಡಿಸೋಜ, ಲಯನ್ ಫೆಲಿಕ್ಸ್ ಡಿಸೋಜ, ಲಯನ್ ಮೈಕಲ್ ಸಿಕ್ವೇರ, ಲಯನ್ ಮೆಲಿಟಾ ಬರ್ಬೋಜಾ, ಲಯನ್ ವಿದ್ಯಾ ಮಸ್ಕರೇನ್ಹಸ್, ಲಯನ್ ರಿಚರ್ಡ್ ಡಿಸೋಜ, ಹೊಸ ಸದಸ್ಯ ದಂಪತಿಗಳಾದ ಲಯನ್ ಜೋನ್ ಡಿಸಿಲ್ವ ಹಾಗೂ ಲಯನ್ ಐಡ ಡಿಸಿಲ್ವ ಹಾಜರಿದ್ದರು.