ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮೂಡುಬಿದಿರೆಯಿಂದ ಪೋಸ್ಟ್ ಕಾರ್ಡ್ ಚಳವಳಿ

0
50

ಕರ್ನಾಟಕ ಉಚ್ಚ ನ್ಯಾಯಾಲಯದ ಪೀಠವನ್ನು ಕರಾವಳಿಯ ಮಂಗಳೂರಿನಲ್ಲಿ ಸ್ಥಾಪಿಸಲು ಒತ್ತಾಯಿಸಿ ಸಾರ್ವಜನಿಕರ ಮೂಲಕ ಪೋಸ್ಟ್ ಕಾರ್ಡ್ ಚಳವಳಿ ಇಂದಿನಿಂದ ಪ್ರಾರಂಭವಾಗಿದೆ.

ಬಹಳ ದೂರದ ಬೆಂಗಳೂರಲ್ಲಿ ಹೈಕೋರ್ಟ್ ಇರುವುದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಇತ್ಯಾದಿ ಜಿಲ್ಲೆಗಳವರಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ವ್ಯಾಜ್ಯ ಪರಿಹಾರಕ್ಕಾಗಿ ಪ್ರತಿ ಬಾರಿ ಬೆಂಗಳೂರಿಗೆ ಅಲೆದಾಡಬೇಕಾಗುತ್ತದೆ. ಇದು ಸಂಚಾರ, ಸಂಪರ್ಕ, ಸಂವಹನಗಳಿಗೆ ಅತಿ ತೊಂದರೆಯನ್ನು ಉಂಟುಮಾಡುತ್ತಿದ್ದು ಹಲವಾರು ವ್ಯಾಜ್ಯಗಳು ಇದರಿಂದಾಗಿ ಬಿದ್ದು ಹೋದ ಪ್ರಸಂಗಗಳೇ ಅಧಿಕ. ದೂರ, ಸಮಯ ಇತ್ಯಾದಿಗಳ ಕಾರಣದಿಂದಾಗಿ ಹಲವಾರು ಕೇಸುಗಳು ಉಪೇಕ್ಷಿಸಲ್ಪಟ್ಟ ಸಂದರ್ಭಗಳು ನಡೆದಿದೆ.


ಹೀಗಾಗಿ ಸಾಮಾನ್ಯ ಜನರಿಗೆ ಶೀಘ್ರ, ನ್ಯಾಯ ದೊರಕುವ ದೆಸೆಯಲ್ಲಿ ಹೈಕೋರ್ಟ್ ನ ಒಂದು ಪೀಠವನ್ನು ಗುಲ್ಬರ್ಗದಲ್ಲಿ ಸ್ಥಾಪಿಸಿರುವಂತೆ ಮಂಗಳೂರಿನಲ್ಲಿ ಕೂಡ ಸ್ಥಾಪಿಸ ಬೇಕೆಂದು ವಿನಂತಿಸುವ ಪೋಸ್ಟ್ ಕಾರ್ಡ್ ಚಳವಳಿ ಸಾರ್ವಜನಿಕ ಹಲವಾರು ಸಂಘ-ಸಂಸ್ಥೆಗಳ ನೇತಾರದಿಂದ ಪ್ರಾರಂಭವಾಗಿದೆ. ಅದಕ್ಕಾಗಿ ಇಂದು ಅಕ್ಟೋಬರ್ 23 ರಂದು ಮೂಡುಬಿದಿರೆ ಪೋಸ್ಟ್ ಆಫೀಸಿನ ಎದುರಲ್ಲಿ ಸೇರಿದ ಪುರಸಭಾ ಸದಸ್ಯರು ನಾಗರಿಕರ ಪರವಾಗಿ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಹಲವಾರು ಪುರಸಭಾ ಸದಸ್ಯರುಗಳು, ಮೂಡುಬಿದಿರೆ ಹಿರಿಯ ನ್ಯಾಯವಾದಿ ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಬಾಹುಬಲಿ ಪ್ರಸಾದ್, ನ್ಯಾಯವಾದಿ ಸಂಘದ ಅಧ್ಯಕ್ಷ ಹರೀಶ್ , ಪ್ರವೀಣ್ ಲೋಬೋ, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ, ಪತ್ರಕರ್ತರುಗಳ ಪರವಾಗಿ ಅಧ್ಯಕ್ಷ ಸೀತಾರಾಮ ಆಚಾರ್ಯ, ಇನ್ನರ್ ರ್ವೀಲ್ ಸದಸ್ಯರುಗಳ ಪರವಾಗಿ ಅಧ್ಯಕ್ಷೆ ಶ್ವೇತಾ ಜೈನ್, ನಾಗರಿಕರ ಪರವಾಗಿ ವಿಶ್ವಕುಮಾರ್ ಭಟ್, ಪ್ರಕಾಶ್ ಗೌಡ ಹಾಗೂ ಇತ್ಯಾದಿಯರು ಭಾಗವಹಿಸಿ ಅಂಚೆ ಕಾರ್ಡುಗಳನ್ನು ಡಬ್ಬಕ್ಕೆ ಹಾಕುವ ಮೂಲಕ ಚಾಲನೆಗೊಳಿಸಿದರು.

ವರದಿ ರಾಯಿ ರಾಜ ಕುಮಾರ
.

LEAVE A REPLY

Please enter your comment!
Please enter your name here