ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಕೇರಳದ ಗಡಿನಾಡಿನ ಶಾಖೆಯ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿಯ ಐಲ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಸದಸ್ಯರಿಂದ ಸಂಗೀತ ಕಛೇರಿ ಮತ್ತು ಕುಮಾರಿ ಸುಪ್ರಜಾರವರು ವೀಣಾ ವಾದನವನ್ನು ಮಾಡಿದರು.

ಸಂಗೀತ ಕಛೇರಿಯಲ್ಲಿ ಖ್ಯಾತ ಸಂಗೀತ ಸಾಧಕರಾದ ವಿದುಷಿ ಶ್ರೀಮತಿ ದಿವ್ಯ ಚಂದನ್ ಕಾರಂತ್, ಸುಮನಾ ರಾವ್, ಚೇತನಾ ಹೆಬ್ಬಾರ್, ನಂದನ ಹೆಬ್ಬಾರ್, ವೇದಾಂತ ಕಾರಂತ್ ಮುಂತಾದವರು ಸುಶ್ರಾವ್ಯವಾಗಿ ಹಾಡಿ ಶ್ರೀ ದುರ್ಗಾ ಮಾತೆಯ ಎದುರು ಭಕ್ತಿ ಪೂರ್ವಕವಾಗಿ ಸಂಗೀತಾರ್ಚನೆ ಮಾಡಿದರು ಕಲಾಕುಂಚ ಕೇರಳದ ಗಡಿನಾಡಿನ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ್ರು ಪ್ರಾರಂಭದಲ್ಲಿ ಸ್ವಾಗತ ಮಾಡಿ ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು.
ದಾವಣಗೆರೆ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಸೇರಿದಂತೆ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ತಮ್ಮೆಲ್ಲರ ಮೆಚ್ಚುಗೆ ವ್ಯಕ್ತಪಡಿಸಿದರು.

