ಮಗನ ಸಾವಿಗೆ ಸೇಡು: ಅಣ್ಣನ ಮಗನನ್ನೇ ಕೊಂದ ಚಿಕ್ಕಪ್ಪ

0
36

ಸೋನಭದ್ರಾ, : ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಚಿಕ್ಕಪ್ಪ ತನ್ನ ಅಣ್ಣನ ಮಗನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸೋನಭದ್ರಾದಲ್ಲಿ ನಡೆದಿದೆ. ಭಾನುವಾರ ಸಂಜೆ ದುದ್ಧಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗವಾನ್ ಗ್ರಾಮದಲ್ಲಿ ನಡೆದಿದೆ. ಆರು ತಿಂಗಳ ಹಿಂದೆ ಆತನ ಮಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ, ಅಂದು ಬೈಕ್ ಚಲಾಯಿಸುತ್ತಿದ್ದುದು ಜೀತ್ ಸಿಂಗ್ ಸಿಂಗ್ ಆಗಿದ್ದ. ಆತನ ಮೇಲೆ ಸೇಡು ತೀರಿಸಿಕೊಳ್ಳಲು ಆತನ ಚಿಕ್ಕಪ್ಪ ಸಾಕಷ್ಟು ದಿನಗಳಿಂದ ಹೊಂಚು ಹಾಕಿದ್ದ ಎನ್ನಲಾಗಿದೆ. ಸೋನಭದ್ರಾ, ಅಕ್ಟೋಬರ್ 21: ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಚಿಕ್ಕಪ್ಪ ತನ್ನ ಅಣ್ಣನ ಮಗನನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸೋನಭದ್ರಾದಲ್ಲಿ ನಡೆದಿದೆ. ಭಾನುವಾರ ಸಂಜೆ ದುದ್ಧಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗವಾನ್ ಗ್ರಾಮದಲ್ಲಿ ನಡೆದಿದೆ. ಆರು ತಿಂಗಳ ಹಿಂದೆ ಆತನ ಮಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ, ಅಂದು ಬೈಕ್ ಚಲಾಯಿಸುತ್ತಿದ್ದುದು ಜೀತ್ ಸಿಂಗ್ ಸಿಂಗ್ ಆಗಿದ್ದ. ಆತನ ಮೇಲೆ ಸೇಡು ತೀರಿಸಿಕೊಳ್ಳಲು ಆತನ ಚಿಕ್ಕಪ್ಪ ಸಾಕಷ್ಟು ದಿನಗಳಿಂದ ಹೊಂಚು ಹಾಕಿದ್ದ ಎನ್ನಲಾಗಿದೆ.

ಮೃತನನ್ನು 19 ವರ್ಷದ ಜೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಅವರ ಚಿಕ್ಕಪ್ಪ ಛತ್ತು ಸಿಂಗ್ ಎಂದು ಗುರುತಿಸಲಾಗಿದೆ. ಎಸ್‌ಎಚ್‌ಒ ಪ್ರಕಾರ, ಭಾನುವಾರ ಸಂಜೆ ಜೀತ್ ಸಿಂಗ್ ತನ್ನ ಮನೆಯ ಬಾಗಿಲಲ್ಲಿ ಕುಳಿತಿದ್ದಾಗ ಆರೋಪಿ ಛತ್ತು ಸಿಂಗ್ ಜೀತ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಕೊಲೆ ಮಾಡಿದ್ದಾನೆ.

ಪೊಲೀಸರ ಪ್ರಕಾರ, ಈ ಕೊಲೆಗೆ ಎರಡು ಪ್ರಮುಖ ಕಾರಣಗಳಿರಬಹುದು. ಮೊದಲನೆಯದಾಗಿ, ಆರು ತಿಂಗಳ ಹಿಂದೆ, ಆರೋಪಿಯ ಮಗ ಛತ್ತು ಸಿಂಗ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಆ ಸಮಯದಲ್ಲಿ ಜೀತ್ ಸಿಂಗ್ ಬೈಕ್ ಚಲಾಯಿಸುತ್ತಿದ್ದ. ಅಂದಿನಿಂದ ಆರೋಪಿಯು ತನ್ನ ಮಗನ ಸಾವಿಗೆ ತನ್ನ ಅಣ್ಣನ ಮಗ ಜೀತ್ ಸಿಂಗ್ ಕಾರಣ ಎಂದು ಹೇಳುತ್ತಿದ್ದ. ಇನ್ನೊಂದು ಕಾರಣವೆಂದರೆ, ಎರಡೂ ಕುಟುಂಬಗಳ ನಡುವೆ ಆಸ್ತಿಯ ಬಗ್ಗೆ ದೀರ್ಘಕಾಲದ ವಿವಾದವಿತ್ತು. ಆರೋಪಿ ಛತ್ತು ಸಿಂಗ್ ಇದರಿಂದ ಅಸಮಾಧಾನಗೊಂಡಿದ್ದ ಮತ್ತು ಜೀತ್ ಸಿಂಗ್ ಅವರನ್ನು ಕೊಲ್ಲುವುದಾಗಿ ಪದೇ ಪದೇ ಬೆದರಿಕೆ ಹಾಕಿದ್ದ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಸ್ವತಂತ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಕೊಲೆಯಾದ ನಂತರ ಆರೋಪಿ ಛತ್ತು ಸಿಂಗ್ ತಲೆಮರೆಸಿಕೊಂಡಿದ್ದು, ಆತನ ಹುಡುಕಾಟಕ್ಕೆ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ. ಈ ಘಟನೆಯ ನಂತರ, ನಾಗವಾನ್ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ.

LEAVE A REPLY

Please enter your comment!
Please enter your name here