ಕ್ರೂರ ಕೃತ್ಯ: ತಂದೆ ವಿರುದ್ಧ ಸೇಡು ತೀರಿಸಲು ಐದು ವರ್ಷದ ಬಾಲಕನ ಹತ್ಯೆ

0
26

ನವದೆಹಲಿ: ತಂದೆ ವಿರುದ್ಧ ಸೇಡು ತೀರಿಸಿಕೊಳ್ಳಲು ಐದು ವರ್ಷದ ಮಗನನ್ನು ವ್ಯಕ್ತಿಯೊಬ್ಬ ಅಪಹರಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಬಾಲಕನ ತಂದೆಯ ಮನೆಯ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವ್ಯಕ್ತಿ ಮಾಲೀಕನ ಮೇಲೆ ಸೇಡು ತೀರಿಸಿಕೊಳ್ಳಲು ಬಾಲಕನನ್ನು ಹತ್ಯೆ ಮಾಡಿದ್ದಾನೆ. ಪ್ರಕರಣದ ಆರೋಪಿ ನೀತುವಿನ ಬಾಡಿಗೆ ಮನೆಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನೀತು ಪರಾರಿಯಾಗಿದ್ದಾನೆ, ಮತ್ತು ಅವನನ್ನು ಪತ್ತೆಹಚ್ಚಲು ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆರೋಪಿಗೆ ಒಂದು ದಿನದ ಹಿಂದೆ ಬಾಲಕನ ತಂದೆ ಬೈದಿದ್ದರು ಎನ್ನಲಾಗಿದೆ.

ಮಧ್ಯಾಹ್ನ 3.30 ಕ್ಕೆ ನರೇಲಾ ಕೈಗಾರಿಕಾ ಪ್ರದೇಶದಲ್ಲಿ ಮಗುವನ್ನು ಅಪಹರಿಸಲಾಗಿದೆ ಎಂಬ ಕರೆ ಬಂದಿತ್ತು ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಹರೇಶ್ವರ ಸ್ವಾಮಿ ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಮಗ ಮನೆಯ ಹೊರಗೆ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾನೆ ಎಂದು ದೂರು ಕೊಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ಕುಟುಂಬ ಸದಸ್ಯರು ಮತ್ತು ಅಕ್ಕಪಕ್ಕದ ಮನೆಯವರು ಬಾಲಕನನ್ನು ಹುಡುಕಲು ಪ್ರಾರಂಭಿಸಿದರು. ನಂತರ, ಬಾಲಕನ ಶವವು ಹತ್ತಿರದ ನೀತುವಿನ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ದೂರುದಾರರಾದ ಬಾಲಕನ ತಂದೆ ಏಳರಿಂದ ಎಂಟು ಸಾರಿಗೆ ವಾಹನಗಳನ್ನು ಹೊಂದಿದ್ದರು ಮತ್ತು ನೀತು ಮತ್ತು ವಾಸಿಂ ಎಂಬ ಇಬ್ಬರು ಚಾಲಕರನ್ನು ನೇಮಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಒಂದು ದಿನದ ಹಿಂದಷ್ಟೇ ಕೆಟ್ಟದಾಗಿ ವರ್ತಿಸಿದ್ದಕ್ಕಾಗಿ ನೀತುಗೆ ಎರಡರಿಂದ ನಾಲ್ಕು ಬಾರಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಮಾನಕ್ಕೊಳಗಾದ ನೀತು ಮಂಗಳವಾರ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಾಲಕನನ್ನು ಅಪಹರಿಸಿ, ಬಾಡಿಗೆ ಮನೆಗೆ ಕರೆದೊಯ್ದು ಇಟ್ಟಿಗೆಯಿಂದ ತಲೆಗೆ ಹೊಡೆದು ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಅಷ್ಟರಲ್ಲಾಗಲೇ ಬಾಲಕ ಸಾವನ್ನಪ್ಪಿದ್ದ. ಚಾಲಕ ನೀತು ಪರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಬಹು ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ಸ್ಥಳೀಯ ಗುಪ್ತಚರವನ್ನು ಬಳಸಲಾಗುತ್ತಿದೆ.

LEAVE A REPLY

Please enter your comment!
Please enter your name here