ಮೂಡುಬಿದರೆ ಬಂಟ್ವಾಳ ನಡುವೆ ಇರುವ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಎಲ್ಲಾ ಕಡೆಗಳಲ್ಲಿಯೂ ತೀವ್ರ ತಿರುವಿನಿಂದ ಕೂಡಿರುತ್ತದೆ.

ಇಷ್ಟು ಅಪಾಯಕಾರಿಯಾದ ರಸ್ತೆಯಲ್ಲಿ ಕೂಡ ಕಳೆದ ಹಲವಾರು ತಿಂಗಳುಗಳಿಂದ ಕರ್ನಾಟಕ ನೀರು ಸರಬರಾಜು ಮಂಡಳಿಯವರು ತಿರುವುಗಳಲ್ಲಿ ಅರೆ ಬರೆ ಕಾಮಗಾರಿಯನ್ನು ನಡೆಸಿ ಇದ್ದಂತೆಯೇ ಬಿಟ್ಟು ಹೋಗಿರುತ್ತಾರೆ.
ಇದೀಗ ಮೂರು ದಿನಗಳಿಂದ ಬಿರಾವು ಸಮೀಪದಲ್ಲಿ ತೀವ್ರ u ಟರ್ನ್ ಇರುವಲ್ಲಿ ಅರ್ಧದಷ್ಟು ರಸ್ತೆಯನ್ನು ನುಂಗಿರುವಂತೆ ಕಾಮಗಾರಿಯನ್ನು ಅರ್ಧದಲ್ಲಿ ನಿಲ್ಲಿಸಿ ತೆರಳಿದ್ದಾರೆ. ಹೊಸಬೆಟ್ಟು ಗುತ್ತು ಗೆ ತೆರಳುವ ಮೂರು ರಸ್ತೆಗಳು ಸೇರುವ ಮತ್ತು ತೀವ್ರ ತಿರುವನ್ನು ಹೊಂದಿರುವ ಅತ್ಯಂತ ಅಪಾಯಕಾರಿಯದ ಪ್ರದೇಶದಲ್ಲಿ ಈ ರೀತಿಯಲ್ಲಿ ಅರೆಬರೆ ಕಾಮಗಾರಿಯನ್ನು ನಡೆಸಿ ಪ್ರಯಾಣಿಕರಿಗೆ, ವಾಹನಗಳವರಿಗೆ ತೀವ್ರ ತೊಂದರೆಯನ್ನು ಉಂಟು ಮಾಡಲಾಗಿರುತ್ತದೆ.
.ವರದಿ ರಾಯಿ ರಾಜ ಕುಮಾರ