ಕನ್ಯಾಡಿ ಸೇವಾಭಾರತಿಯಿಂದ 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

0
116

ಸೌತಡ್ಕ : ಬೆಂಗಳೂರು ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿಯ ಸಹಕಾರದೊಂದಿಗೆ ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ ಬೆನ್ನುಹುರಿ ಅಪಘಾತಕ್ಕೊಳಗಾದ ಶಿಬಾಜೆಯ ಶ್ರೀ ಮೋಹನ್ ಪಿಬಿ,ಶ್ರೀ ಮಹೇಶ್ ಗುತ್ತಿಗಾರು, ನಿಡ್ಲೆಯ ಶ್ರೀ ಚಂದ್ರಶೇಖರ್ ಭಟ್, ಪುತ್ತೂರಿನ ಶ್ರೀಮತಿ ಜೈನಾಬಿ, ಬದಿಯಡ್ಕದ ಶ್ರೀ ಚಂದ್ರಶೇಖರ್, ಕಡಬದ ಶ್ರೀ ಧನಂಜಯ ಮತ್ತು ಶ್ರೀ ಯೋಗೀಶ್ ಎರ್ಮಲ್ ರವರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮವನ್ನು ಅಕ್ಟೋಬರ್ 20 ದೀಪಾವಳಿ ಹಬ್ಬದಂದು ಸೌತಡ್ಕ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪುತ್ತೂರಿನ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರಾದ ಶ್ರೀಮತಿ ರೂಪಲೇಖರವರು ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ ಫಲಾನುಭವಿಗಳಿಗೆ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು. ಈ ಸಂಧರ್ಭದಲ್ಲಿ ಸೇವಾಧಾಮ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್, ಬೆನ್ನು ಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, ಆರೈಕೆದಾರರು, ಫಲಾನುಭವಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here