ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಮೈಸೂರು ಶಾಖೆಯ ಅಧ್ಯಕ್ಷರಾಗಿ ಡಾ. ನಾಗರಾಜ್ ವಿ. ಬೈರಿ ಆಯ್ಕೆಯಾಗಿದ್ದಾರೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ನ.ಗಂಗಾಧರಪ್ಪ, ಪ್ರಧಾನ ಕಾರ್ಯದರ್ಶಿ ಸಂಗೀತ ಪ್ರಸನ್ನ ನಾಡಿಗ್, ಖಜಾಂಚಿಯಾಗಿ ಪಿ.ಸಿದ್ದೇಶ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಶೇಖರ್, ಸಂತೋಷ್‌ಕುಮಾರ್, ಪ್ರಭು ಕೆ., ವೆಂಕಟೇಶ್ ಎಸ್.ವೆಂಕಟೇಶ್, ಮಹಾದೇವ್, ವಂದನಾ ಶ್ರೀಧರ್‌ನಾಯಕ್, ಮಹಾಬಲೇಶ್ವರ ಬೈರಿ ಅಯ್ಕೆಯಾಗಿದ್ದಾರೆ. ಸದ್ಯದಲ್ಲೆ ಕಲಾಕುಂಚ ಮೈಸೂರು ಶಾಖೆ ಉದ್ಘಾಟನೆಯ ಜೊತೆಗೆ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪರೀಕ್ಷೆಯ ಪೂರ್ವಭಾವಿ ಸಿದ್ಧತಾ ಉಚಿತ ಕಾರ್ಯಾಗಾರ ನಡೆಯಲಿದೆ ಎಂದು ದಾವಣಗೆರೆಯ ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.

