ಮಿಲಾಗ್ರಿಸ್ ಕಾಲೇಜಿನಲ್ಲಿ “ಮಂಥನ್ – 2025” ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವ

0
88

ಮಂಗಳೂರು: ವಿದ್ಯಾರ್ಥಿ ಜೀವನದಲ್ಲೇ ಏನಾದರೊಂದು ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಹಾಗಿದ್ದಾಗ ಮಾತ್ರ ಭವಿಷ್ಯದ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.ಅಂತೆಯೇ ನೀವು ಬೆಳೆಯುವಾಗ ಇನ್ನೊಬ್ಬರಿಗೆ ನೋವು ಮಾಡಬೇಡಿ. ಇನ್ನೊಬ್ಬರನ್ನು ತುಳಿದು ಯಶಸ್ಸನ್ನು ಸಾಧಿಸುತ್ತೇನೆ ಅಂದರೆ ಅದು ಅಸಾಧ್ಯ. ಕರ್ಮ ಅನ್ನುವುದು ಯಾವತ್ತೂ ಬಿಟ್ಟು ಹೋಗೋದಿಲ್ಲ. ಎಂದು ಕನ್ನಡ ಹಾಗೂ ತುಳು ನಟ ಸ್ವರಾಜ್ ಶೆಟ್ಟಿ ತಿಳಿಸಿದರು.

ಅವರು ಮಿಲಾಗ್ರಿಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಉತ್ಸವ “ಮಿಲಾಗ್ರಿಸ್ ಮಂಥನ್ – 2025” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಿಲಾಗ್ರಿಸ್ ಸಂಸ್ಥೆಗಳ ಸಂಚಾಲಕರಾದ ರೆ. ಫಾ. ಬೊನವೆಂಚರ್ ನಜರೆತ್ ಮಾತನಾಡಿ ‘ಅಂತರ್ ಕಾಲೇಜು ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ವೈಸರ್ ಜನರಲ್, ಮ್ಯಾಕ್ಸಿಮ್ ಎಲ್ ನೊರೊನ್ಹ ಮಾತನಾಡಿ, ಜೀವನದಲ್ಲಿ ಸಿಗುವ ಅನುಭವಗಳೆಲ್ಲ ಒಂದೊಂದು ಪಾಠ ಕಲಿಸುತ್ತದೆ. ಇಂತಹ ಸ್ಪರ್ಧೆಗಳು ಕೂಡ ನಿಮ್ಮ ಜೀವನದಲ್ಲಿ ಮಹತ್ವದ  ಪಾತ್ರವನ್ನು ವಹಿಸುವುದಕ್ಕೆ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಒಟ್ಟು 21 ಕಾಲೇಜಿನಿಂದ 396 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪಿಯುಸಿ ವಿದ್ಯಾರ್ಥಿಗಳಿಗಾಗಿ ಫುಟ್ಬಾಲ್ ಪಂದ್ಯಾಟವು ಕೂಡ ನಡೆಯಿತು. 15 ತಂಡಗಳು ಭಾಗವಹಿಸಿದ್ದವು.

 ಮಂಗಳೂರುಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರೆ. ಡಾ. ಅಲ್ವಿನ್ ಸೆರಾವೊ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಉಪಪ್ರಾಂಶಪಾಲರಾದ ಪ್ರೊ. ಗ್ಲೆನ್ಸಿಯಾ ಫೆರ್ನಾಂಡಿಸ್ ವಂದಿಸಿದರು.

  ಮಿಲಾಗ್ರಿಸ್ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಮೆಲ್ವಿನ್ ವಾಸ್, ಮಿಲಾಗ್ರಿಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಯಾನ ಲೋಬೋ, ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಫಾ. ಉದಯ್ ಫರ್ನಾಂಡಿಸ್, ಮಿಲಾಗ್ರಿಸ್ ಕಾಲೇಜಿನ ಐ ಕ್ಯೂ ಎಸಿ ಸಂಚಾಲಕರಾದ ಪ್ರೊ. ಚೇತನಾ ಕುಮಾರಿ, ಪ್ರೊ. ಡೆನ್ಝಿಲ್ ಸೆಲೆಸ್ಟೈನ್ ಡಿ’ಕೋಸ್ಟಾ, ವಿದ್ಯಾರ್ಥಿ ಪ್ರತಿನಿ ಪ್ರತಿನಿಧಿ ಪ್ರೇಕ್ಷಿಕ ಹಾಗೂ ರೋಹನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರೆ. ಡಾ. ಅಲ್ವಿನ್ ಸೆರಾವೊ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಉಪಪ್ರಾಂಶಪಾಲರಾದ ಪ್ರೊ. ಗ್ಲೆನ್ಸಿಯಾ ಫೆರ್ನಾಂಡಿಸ್ ವಂದಿಸಿದರು.

ಮಿಲಾಗ್ರಿಸ್  ಮಂಥನ್-2025ರ ಸಮಗ್ರ ಪ್ರಶಸ್ತಿಯನ್ನು ಕೆನರಾ ಪದವಿ ಪೂರ್ವ ಕಾಲೇಜು ಮಂಗಳೂರು ಹಾಗೂ ದ್ವಿತೀಯ ಸ್ಥಾನವನ್ನು ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಪಡೆದುಕೊಂಡಿತು.

LEAVE A REPLY

Please enter your comment!
Please enter your name here