ಮಂಗಳೂರು : ಲಯನ್ಸ್ ಕ್ಲಬ್ ಮಂಗಳೂರು ಸೋಮೇಶ್ವರ ವತಿಯಿಂದ ವಿಶ್ವ ಶಾಂತಿ ಚಿತ್ರಕಲಾ ಸ್ಪರ್ಧೆಯನ್ನು ಪರಿಜ್ಞಾನ ವಿದ್ಯಾಲಯ ಸೋಮೇಶ್ವರದಲ್ಲಿ ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಸುಮಾರು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಲಯನ್ ಕಮಾಂಡರ್ ಕೆ ವಿಜಯಕುಮಾರ್ (ನಿವೃತ್ತ) ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಲಯನ್ ಕೆ ವಿಜಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಂಜಿತಾ ಮಹೇಶ್ ಜೋಶಿ ಉಪಸ್ಥಿತರನ್ನು ಸ್ವಾಗತಿಸಿದರು. ಕ್ಲಬ್ ಸದಸ್ಯರಾದ ನಿತೀಶ್ ಕೃಷ್ಣ, ಶಶಿಕುಮಾರ್ ನಾಯರ್, ಫ್ಲೇವಿಯಾ ಡಿ’ಸೋಜಾ ಮತ್ತು ನಿರ್ಮಿತಾ ಭಂಡಾರಿ ಸಭೆಯಲ್ಲಿ ಭಾಗವಹಿಸಿದರು . ಕ್ಲಬ್ ಕಾರ್ಯದರ್ಶಿ ಲಯನ್ ಕೆ ಗೋಪಿನಾಥ್ ಧನ್ಯವಾದ ಅರ್ಪಿಸಿದರು.ವಿಜೇತರಿಗೆ ಲಯನ್ ಇಂಟರ್ನ್ಯಾಷನಲ್ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಪರಿಜ್ಞಾನ ವಿದ್ಯಾಲಯದ ವಿದ್ಯಾರ್ಥಿಗಳಾದ ಮಾಸ್ಟರ್ ದಿಶಾನ್ ಕೆ 7ನೇ ತರಗತಿ,ಮಾಸ್ಟರ್ ಮಹಿನ್ ಶ್ರೀರಾಮ್ 6ನೇ ತರಗತಿ ಹಾಗೂ ಕುಮಾರಿ ಶ್ರೇಯ 8ನೇ ತರಗತಿ ಕ್ರಮೇಣವಾಗಿ 1,2,3 ಬಹುಮಾನವನ್ನು ಪಡೆದರು.

