ಅಯೋಡಿನ್ ಎಂಬ ಜೀವಧಾತು ಮನುಷ್ಯನ ಆರೋಗ್ಯ ರಕ್ಷಣೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಅಯೆಡೋ ಎಂಬ ಗ್ರೀಕ್ ಶಬ್ದದಿಂದ ಹುಟ್ಟಿಕೊಂಡ ಈ ಶಬ್ದಕ್ಕೆ ಗ್ರೀಕ್‍ನಲ್ಲಿ ನೇರಳೆ ಬಣ್ಣ ಎಂಬ ಅರ್ಥ ಬರುವುದರಿಂದ ಅಯೋಡಿನ್ ಎಂಬ ಹೆಸರು ನೀಡಲಾಗಿದೆ. 1811ರಲ್ಲಿ ಪ್ರಾನ್ಸ್‍ನ ರಾಸಾಯನಿಕ ತಜ್ಞರಾದ ಬರ್ನಾಡ್ ಎಂಬಾತ ಅಯೋಡಿನ್‍ನ್ನು ಕಂಡು ಹಿಡಿದ. ಅಯೋಡಿನ್ ರಾಸಾಯನಿಕ ನೇರಳೆ ಬಣ್ಣವನ್ನೇ ಹೊಂದಿರುತ್ತದೆ.

ಅಯೋಡಿನ್ ನಾವು ಸೇವಿಸುವ ಪೌಷ್ಠಿಕಾಂಶಗಳಲ್ಲಿನ ಒಂದು ಅತೀ ಅವಶ್ಯಕ ವಸ್ತುವಾಗಿದ್ದು ದಿನವೊಂದಕ್ಕೆ 150 ರಿಂದ 200ಕ್ಕೆ ಮೈಕ್ರೊಗ್ರಾಂಗಳಷ್ಟು ಅಯೋಡಿನ್ ದೇಹಕ್ಕೆ ಅವಶ್ಯಕತೆ ಇದೆ. ನಾವು ಸೇವಿಸುವ ಆಹಾರದ ಮತ್ತು ನೀರಿನ ಮುಖಾಂತರ ದೇಹಕ್ಕೆ ಸೇರಿಕೊಂಡು ಮುಖ್ಯವಾಗಿ ರಕ್ತದ ಮುಖಾಂತರ ಗುರಾಣಿ ಗ್ರಂಥಿಗಳಲ್ಲಿ ಶೇಖರಣೆಗೊಳ್ಳುತ್ತದೆ. ಒಂದು ರೀತಿಯಲ್ಲಿ ಗುರಾಣಿ ಗ್ರಂಥಿಗಳು ಅಯೋಡಿನ್ ಜೀವದಾತುವಿನ ಉಗ್ರಾಣವಿದ್ದಂತೆ ನಾವು ಸೇವಿಸುವ ತರಕಾರಿ, ಹಣ್ಣು, ಕಾಳು ಕಡ್ಡಿ, ಹೈನು ವಸ್ತುಗಳು ಮತ್ತು ಮೊಟ್ಟೆಗಳ ಮುಖಾಂತರ “ಅಯೋಡಿನ್” ದೇಹಕ್ಕೆ ಸೇರುತ್ತದೆ. ಇವುಗಳಲ್ಲಿನ ಅಯೋಡಿನ್ ಪ್ರಮಾಣ ಭೂಮಿಯಲ್ಲಿನ ನೀರಿನಲ್ಲಿರುವ ಅಯೋಡಿನ್ ಪ್ರಮಾಣಕ್ಕೆ ಅನುಸರಿಸಿ ಇರುತ್ತದೆ. ಹೆಚ್ಚಿನ ಅಯೋಡಿನ್ ನಾವು ಆಹಾರ ಬೇಯಿಸುವ ಸಮಯದಲ್ಲಿ ನಷ್ಟವಾಗುತ್ತದೆ. ಸಾಮಾನ್ಯವಾಗಿ ಅಯೋಡಿನ್ ಉಪ್ಪಿನ ಮುಖಾಂತರ ದೇಹಕ್ಕೆ ನೀಡಲಾಗುತ್ತದೆ. ಉಪ್ಪಿಗೆ ಅಯೋಡಿನ್ ಸೇರಿಸುವುದರಿಂದ ಉಪ್ಪಿನ ಗುಣ ವಾಸನೆ ಮತ್ತು ರುಚಿಯಲ್ಲಿ ಬಲಾವಣೆಯಾಗುವುದಿಲ್ಲ ಮತ್ತು ಅತೀ ಸುಲಭವಾಗಿ ನೀಡಲಾಗುತ್ತದೆ. ದಿನವೊಂದರ 5ರಿಂದ 10ಗ್ರಾಂ ಉಪ್ಪಿನ ಅವಶ್ಯಕತೆ ನಮ್ಮ ದೇಹಕ್ಕೆ ಇರುತ್ತದೆ. ಮತ್ತು ಪ್ರತಿ ಗ್ರಾಂ ಉಪ್ಪಿನಲ್ಲಿ 50ರಿಂದ 75 ಮೈಕ್ರೋಗ್ರಾಂಗಳಷ್ಟು ಅಯೋಡಿನ್ ಸೇರಿಸಿದಲ್ಲಿ ದೈನಂದಿನ ಅಯೋಡಿನ್ ಅಗತ್ಯವಾದ 150 ರಿಂದ 200ಮೈಕ್ರೋಗ್ರಾಂ ದೇಹಕ್ಕೆ ದೊರಕುತ್ತದೆ. ಒಬ್ಬ ಆರೋಗ್ಯವಂಥ ವ್ಯಕ್ತಿಯ ದೇಹದಲ್ಲಿ ಸುಮಾರು 15ರಿಂದ 20 ಮೀಲಿಗ್ರಾಂನಷ್ಟು ಅಯೋಡಿನ್ ಇರುತ್ತದೆ. ಇದರ ಬಹುತೇಕ ಭಾಗ ಅಂದರೆ ಶೇಕಡಾ 80ರಷ್ಟು ನಮ್ಮ ದೇಹದ ಕುತ್ತಿಗೆಯ ಭಾಗದಲ್ಲಿರುವ ಥೈರಾಯಿಡ್ ಅಥವಾ ಗುರಾಣಿ ಗ್ರಂಥಿಯಲ್ಲಿ ಶೇಖರಣೆಯಾಗುತ್ತದೆ. ಗುರಾಣಿ ಗ್ರಂಥಿ ನಮ್ಮ ದೇಹದ ಅತೀ ಮುಖ್ಯ ಅಂತಸ್ರಾವ ಅಥವಾ ಎಂಡೋಕ್ಸೈನ್ ಗ್ರಂಥಿಯಾಗಿದ್ದು ಥೈರಾಕ್ಸಿನ್ (ಖಿ4) ಮತ್ತು ಟೈ ಅಯಡೊ ಥೈರೋನಿನ್ (ಖಿ3) ಎಂಬ ಎರಡು ಅತೀ ಮುಖ್ಯ ರಸದೂತಗಳನ್ನು ಉತ್ಪಾದಿಸಿ, ಸ್ರವಿಸಿ ದೇಹದ ದೈಹಿಕ ಮತ್ತು ಭಾದ್ಧಿಕ ಬೆಳವಣಿಗೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಈ ಖಿ4 ಮತ್ತು ಖಿ3 ರಸದೂತಗಳ ಉತ್ಪಾದನೆಗೆ ಅಯೋಡಿನ್ ಅತೀ ಅವಶ್ಯಕ ಜೀವದಾತು ಆಗಿರುತ್ತದೆ. ಕಾರಣಾಂತರಗಳಿಂದ ನಾವು ಸೇವಿಸುವ ಆಹಾರದಲ್ಲಿ ಅಯೋಡಿನ್ ಪ್ರಮಾಣ ಕಡಿಮೆಯಾಗಿದ್ದಲ್ಲಿ ಗುರಾಣಿ ಗ್ರಂಥಿಗಳು ಊದಿಕೊಂಡು ಹೆಚ್ಚಿನ ಅಯೋಡಿನ್ ಪೂರೈಕೆಗಾಗಿ ಹಪಹಪಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ಅಯೋಡಿನ್ ಅಂಶ ಕಡಿಮೆಯಾದಾಗ ಪಿಟ್ಯುಟರಿ ಗ್ರಂಥಿಯ ಕೇಂದ್ರಿಯ ನರ ಮಂಡಲದಿಂದ ಖಿSಊ ಎಂಬ ವಿಶೇಷ ರಾಸಾಯನಿಕ ಸ್ರವಿಸಲ್ಪಟ್ಟು, ಹೆಚ್ಚು ಹೆಚ್ಚು ಖಿ3 ಮತ್ತು ಖಿ4 ರಸದೂತಗಳನ್ನು ಉತ್ಪಾದಿಸುವಂತೆ ಗುರಾಣಿ ಗ್ರಂಥಿಗಳಿಗೆ ನಿರ್ದೇಶನ ನೀಡುತ್ತದೆ. ಅಯೋಡಿನ್ ಕೊರತೆಯಿಂದಾಗಿ ಹೆಚ್ಚಿನ ರಸದೂತಗಳ ಪೂರೈಕೆಗಾಗಿ ಗುರಾಣಿ ಗ್ರಂಥಿಗಳು ಊದಿಕೊಂಡು ದೊಡ್ಡದಾಗುತ್ತದೆ. ಇದನ್ನು ನಾವು ಗಾಯಿಟರ್ ಅಥವಾ ಆಡುಭಾಷೆಯಲ್ಲಿ ಗಳಗಂಡ ರೋಗ ಎನ್ನುತ್ತೇವೆ. ಬರೀ ಅಯೋಡಿನ್ ಕೊರತೆಯೊಂದೇ ಗಳಗಂಡ ರೋಗಕ್ಕೆ ಕಾರಣವಲ್ಲದಿದ್ದರೂ, ಶೇಕಡಾ 50ರಿಂದ 60 ಮಂದಿಯಲ್ಲಿ ಅಯೋಡಿನ್ ಕೊರತೆಯು ಕಾರಣ ಎಂದು ಅಂಕಿಅಂಶಗಳು ಸಾರಿ ಹೇಳಿದೆ.
ದಿನವೊಂದಕ್ಕೆ 150 ರಿಂದ 200 ಮೈಕ್ರೊಗ್ರಾಂನಷ್ಟು ಅಯೋಡಿನ್ ನಮ್ಮ ದೇಹಕ್ಕೆ ಅವಶ್ಯಕ. ಅಗತ್ಯಕ್ಕಿಂತ ಜಾಸ್ತಿ ಅಯೋಡಿನ್ ದೇಹಕ್ಕೆ ಸೇರಿದಲ್ಲಿ ಮೂತ್ರದ ಮುಖಾಂತರ ಈ ಹೆಚ್ಚಾದ ಅಯೋಡಿನ್ ದೇಹದಿಂದ ಹೊರಹಾಕಲ್ಪಡುತ್ತದೆ. ಮೂತ್ರದಲ್ಲಿ ಅಯೊಡಿನ್ ಪ್ರಮಾಣ 20 ಮೈಕ್ರೋಗ್ರಾಂಗಿಂತಲೂ ಕಡಮೆ ಇದ್ದಲ್ಲಿ ಆ ವ್ಯಕ್ತಿಗೆ ಅಯೋಡಿನ್ ಕೊರತೆ ಇದೆ ಎಂಬ ಸೂಚನೆಯಾಗಿರುತ್ತದೆ. ಶೇಕಡಾ 90ರಷ್ಟು ಅಯೋಡಿನ್ ಮೂತ್ರದ ಮುಖಾಂತರವೇ ದೇಹದಿಂದ ವಿಸರ್ಜಿಸಲ್ಪಡುತ್ತದೆ. ಅಗತ್ಯಕ್ಕಿಂತ ಕಡಿಮೆ ಅಯೋಡಿನ್ ದೇಹಕ್ಕೆ ಸಿಕ್ಕಿದ್ದಲ್ಲಿ ಮೂತ್ರದಲ್ಲಿರುವ ಅಯೋಡಿನ್ ಪ್ರಮಾಣ ಗಣನೀಯವಾಗಿ ಕುಸಿಯುತ್ತದೆ. ನಾವು ಸೇವಿಸಿದ ಆಹಾರದಲ್ಲಿನ ಸುಮಾರು 50ರಿಂದ 80 ಮೈಕ್ರೋಗ್ರಾಂನಷ್ಟು ಅಯೋಡಿನ್‍ನ್ನು ಗುರಾಣಿ ಗ್ರಂಥಿಗಳು ರಕ್ತದಿಂದ ಹೀರಿಕೊಂಡು, ಥೈರೋಕ್ಸಿನ್ (ಖಿ4) ರಸದೂತವನ್ನು ಉತ್ಪಾದಿಸುತ್ತದೆ. ದೇಹದ ಅಯೋಡಿನ್‍ನ ಅವಶ್ಯಕತೆ ವಯಸ್ಸಿಗೆ ಅನುಗುಣವಾಗಿ ಇರುತ್ತದೆ. ಶಿಶುಗಳಲ್ಲಿ 50 ಮೈಕ್ರೋಗ್ರಾಂ, 1 ರಿಂದ 10 ವರ್ಷ ಮಕ್ಕಳಿಗೆ 80ರಿಂದ 100 ಮೈಕ್ರೋಗ್ರಾಂ, ವಯಸ್ಸರಲ್ಲಿ 150ರಿಂದ 170 ಮೈಕ್ರೋಗ್ರಾಂ, ಗರ್ಭವತಿಯರಲ್ಲಿ ಮತ್ತು ಹಾಲೂಡಿಸುವವರಲ್ಲಿ 200 ಮೈಕ್ರೋಗ್ರಾಂನಷ್ಟು ಅಯೋಡಿನ್ ಅವಶ್ಯಕತೆ ಇರುತ್ತದೆ
ಅಯೋಡಿನ್ ಕೊರತೆ:-
ದೇಹದ ಬೌದ್ಧಿಕ, ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಗುರಾಣಿ ಗ್ರಂಥಿಯ ಕಾರ್ಯವೈಖರಿ ಬಹಳ ಮುಖ್ಯ. ಅಯೋಡಿನ್ ಕೊರತೆ ಉಂಟಾದಲ್ಲಿ, ಗುರಾಣಿ ಗ್ರಂಥಿಗಳು ಸರಿಯಾದ ಪ್ರಮಾಣದಲ್ಲಿ ಖಿ3 ಮತ್ತು ಖಿ4 ರಸದೂತಗಳನ್ನು ಉತ್ಪಾದಿಸಲು ಸಾಧ್ಯವಾಗದೇ ಬೇರೆ ಬೇರೆ ರೀತಿಯ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೆ ಕಾರಣವಾಗುತ್ತದೆ. ದೇಹದ ತೂಕ ಹೆಚ್ಚಳ, ದೇಹದ ಮೂಳೆಗಳ ಬೆಳವಣಿಗೆ ಮೆದುಳಿನ ಬೆಳವಣಿಗೆ ಮುಂತಾದವುಗಳಿಗೆ ಖಿ3 ಮತ್ತು ಖಿ4 ಅತೀ ಅವಶ್ಯಕ. ಅಯೋಡಿನ್ ಕೊರತೆಯಿಂದಾಗಿ ಇವೆಲ್ಲವುಗಳ ಬೆಳವಣಿಗೆ ಕುಂಠಿತವಾಗಿ ಸಾಕಷ್ಟು ತೊಂದರೆಗಳಿಗೆ ಕಾರಣವಾಗಬಹುದು.
ಗರ್ಭಸ್ಥ ಶಿಶುವಿನಲ್ಲಿ ಅಯೋಡಿನ್ ಕೊರತೆಯಿಂದಾಗಿ ಗರ್ಭಸ್ರಾವ, ಸತ್ತು ಹುಟ್ಟುವಿಕೆ, ಜನ್ಮ ನ್ಯೂನತೆ, ಬಾಲ್ಯ ಸಾವು, ನರಮಂಡಲ ತೊಂದರೆ, ಬುದ್ದಿ ಮಾಂದ್ಯತೆ, ಕಿವುಡು, ಮೂಗತನ, ಕಾಲಿನ ಶಕ್ತಿ ಕುಂಠಿತವಾಗುವುದು ಮೆಳ್ಳೆ ಗಣ್ಣು ಮುಂತಾದವುಗಳಿಗೆ ಕಾರಣವಾಗುತ್ತದೆ.
ಮಕ್ಕಳಲ್ಲಿ ಅಯೋಡಿನ್ ಕೊರತೆಯಿಂದಾಗ ಗಳಗಂಡ, ಕುಂಠಿತಗೊಂಡ ಬೌದ್ಧಿಕ ಶಕ್ತಿ, ಸೋಮಾರಿತನ, ಕುಂಠಿತ ಶ್ರವಣಶಕ್ತಿ, ಚಳಿ ತಾಳದಿರುವುದು, ಒಣಗಿದ ದಪ್ಪ ಚರ್ಮ ನಿಧಾನ ನಡಿಗೆ ಮತ್ತು ಗೊಗ್ಗರ ಧ್ವನಿ, ಹಸಿವಿಲ್ಲದಿರುವುದು, ಮಲಬದ್ಧತೆ ಮುಂತಾದವುಗಳು ಕಂಡುಬರುತ್ತದೆ. ಒಟ್ಟಿನಲ್ಲಿ ದೇಹದ ಪ್ರತಿ ಜೀವಕೋಶಗಳ ಬೆಳವಣಿಗೆ ಕುಂಠಿತವಾಗಿ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿರುತ್ತದೆ.
ವಯಸ್ಕರಲ್ಲಿ ಅಯೋಡಿನ್ ಕೊರತೆಯಿಂದಾಗಿ, ಹೈಪೋಥ್ಯೆರಾಯಿಡಿಸಮ್ ಎಂಬ ಕಾಯಿಲೆ ಬಂದು ಮೇಲೆ ತಿಳಿಸಿದ ಎಲ್ಲಾ ಲಕ್ಷಣಗಳು ಹೆಚ್ಚು ತೀವ್ರವಾಗಿ ಕಾಡುತ್ತದೆ.
ಗಳಗಂಡ (ಗಾಯಿಟರ್) ಹೇಗೆ ಉಂಟಾಗುತ್ತದೆ:-
ಆಹಾರದಲ್ಲಿ ಅಯೋಡಿನ್ ಕೊರತೆಯಾದಾಗ, ದೇಹದಲ್ಲಿ ಅಯೋಡಿನ್ ಪ್ರಮಾಣವು ಕುಗ್ಗುತ್ತದೆ. ಗುರಾಣಿ ಗ್ರಂಥಿಗಳಿಗೂ ಅಯೋಡಿನ್ ಜೀವಧಾತು ಅಲಭ್ಯವಾಗುತ್ತದೆ. ದೇಹದಲ್ಲಿ ಅಳಿದುಳಿದ ಅಯೋಡಿನನ್ನು ಹೀರಿಕೊಂಡು ಗುರಾಣಿ ಗ್ರಂಥಿಗೆ ನೀಡುವ ಪ್ರಕ್ರಿಯೆಯಿಂದಾಗಿಯೇ ಗುರಾಣಿ ಗ್ರಂಥಿಗಳು ದೊಡ್ಡದಾಗುತ್ತದೆ. ಖಿ4 ಮತ್ತು ಖಿ3 ಎಂಬ ಗುರಾಣಿ ಗ್ರಂಥಿಗಳ ರಸದೂತ ಸ್ರವಿಸುವಿಕೆ ಕಡಿಮೆಯಾದಾಗ ಇಟ್ಯುಟರಿ ಗ್ರಂಥಿಯಿಂದ ಥ್ಯೆರಾಯಿಡ್ ಉತ್ತೇಜಕ ರಸದೂತ (ಖಿSಊ) ಗಳ ಪ್ರಮಾಣ ಗಣನೀಯವಾಗಿ ಏರುತ್ತದೆ. ಇದರ ಒತ್ತಡದಿಂದಾಗಿ ಗುರಾಣಿ ಗ್ರಂಥಿಯ ಜೀವಕೋಶಗಳು ಮತ್ತಷ್ಟು ಖಿ3 ಮತ್ತು ಖಿ4 ಉತ್ಪಾದನೆಗಾಗಿ ತಮ್ಮ ಶಕ್ತಿಮೀರಿ ಪ್ರಯತ್ನಿಸುತ್ತವೆ. ಈ ಪ್ರಕ್ರಿಯೆಯಿಂದಾಗಿ ಗುರಾಣಿ ಗ್ರಂಥಿಗಳ ಎರಡು ಹಾಲೆಗಳು ಊದಿಕೊಳ್ಳುತ್ತದೆ ಅಥವಾ ಗಾತ್ರದಲ್ಲಿ ಹಿರಿದಾಗುತ್ತದೆ. ಇದು ಕುತ್ತಿಗೆಯ ಭಾಗದಲ್ಲಿ ಎದ್ದು ಕಾಣುತ್ತದೆ ಮತ್ತು ನೋಡಲು ಅಸಹ್ಯವಾಗಿರುತ್ತದೆ. ಸುಮಾರು 80 ಶೇಕಡಾ ಸಂದರ್ಭಗಳಲ್ಲಿ ಗಳಗಂಡ ರೋಗಕ್ಕೆÀ ಅಯೋಡಿನ್ ಕೊರತೆಯೇ ಕಾರಣ ಎಂದು ತಿಳಿದು ಬಂದಿದೆ. ಕೆಲವೊಂದು ಬೌಗೋಳಿಗೆ ಪ್ರದೇಶಗಳ ಮಣ್ಣಿನಲ್ಲಿ ಮತ್ತು ನೀರಿನಲ್ಲಿ ಅಯೋಡಿನ್ ಪ್ರಮಾಣ ಕಡಿಮೆ ಇರುವುದೇ ಬಹುಮುಖ್ಯ ಕಾರಣವಾಗಿರುತ್ತದೆ. ಈ ಕಾರಣದಿಂದಲೇ ಉಪ್ಪಿಗೆ ಪೋಟೆಸಿಯಮ್ ಅಯೋಡೈಡ್ ಎಂಬ ರಾಸಾಯನಿಕ ಸೇರಿಸಿ ದೇಹಕ್ಕೆ ಅತೀ ಅಗತ್ಯವಿರುವ ಅಯೋಡಿನ್‍ನ್ನು ಪೂರೈಸಲಾಗುತ್ತದೆ. ಇದನ್ನು ಅಯೋಡೈಸ್‍ಡ್ ಉಪ್ಪು ಎಂದು ಕರೆಯುತ್ತಾರೆ. 1924ರಲ್ಲಿಯೇ ಈ ಅಯೋಡೈಸ್ ಉಪ್ಪಿನ ಬಳಕೆಯನ್ನು ಜಾರಿಗೆ ತರಲಾಗಿದೆ.
ಕೊನೆಯ ಮಾತು
ಅಯೋಡಿನ್ ನಮ್ಮ ದೇಹದ ಬೌದ್ಧಿಕ ಮತ್ತು ದ್ಯೆಹಿಕ ಬೆಳವಣಿಗೆಗೆ ಅತೀ ಅಗತ್ಯವಾದ ಜೀವಧಾತು ಆಗಿರುತ್ತದೆ. ಹುಟ್ಟುವ ಮಕ್ಕಳಲ್ಲಿ ಬುದ್ದಿ ಮಾದ್ಯಂತೆಯನ್ನು ತಡೆಯಲು ಅಯೋಡಿನ್ ಅತೀ ಅಗತ್ಯ. ವಿಶ್ವದಾದ್ಯಂತ ಸುಮಾರು 75 ಕೋಟಿ ಮಂದಿ ಗಾಯಿಟರ್ (ಗಳಗಂಡ) ರೋಗದಿಂದ ಬಳಲುತ್ತಿದ್ದು ಅಯೋಡಿನ್ ಕೊರತೆಯೇ ಇದಕ್ಕೆ ಬಹುಮುಖ್ಯ ಕಾರಣವಾಗಿರುತ್ತದೆ. ಜಾಗತಿಕವಾಗಿ 5ರಿಂದ 8ಕೋಟಿ ಮಕ್ಕಳು ಬುದ್ಧಿಮಾದ್ಯಂತೆಯಿಂದ ಹುಟ್ಟುತ್ತಿದ್ದು, ಗರ್ಭಸ್ಥ ತಾಯಂದಿರಿಗೆ ಸರಿಯಾದ ಪ್ರಮಾಣದಲ್ಲಿ ಅಯೋಡಿನ್ ದೊರೆತಲ್ಲಿ, ಖಂಡಿತವಾಗಿಯೂ ಇದನ್ನು ತಡೆಗಟ್ಟಬಹುದು ಎಂದು ವಿಶ್ವ ಸಂಸ್ಥೆಯು ಅಧಿಕೃತವಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನಿಸರ್ಗದಲ್ಲಿ ಅಯೋಡಿನ್ ಸಾಕಷ್ಟು ಇದ್ದರೂ ಎಲ್ಲರಿಗೂ ಸೂಕ್ತ ಪ್ರಮಾಣದಲ್ಲಿ ದೊರಕದೇ ಇರುವುದರಿಂದ, ಪ್ರತಿಯೊಬ್ಬರೂ ಅಯೋಡಿನ್‍ಯುಕ್ತ ಉಪ್ಪು ಬಳಸಿದಲ್ಲಿ ಮನುಕುಲಕ್ಕೆ ಬರುವ ಬಹಳಷ್ಟು ತೊಂದರೆಗಳನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಮತ್ತು ಅದರಲ್ಲಿಯೆ ಮನುಕುಲದ ಒಳಿತು ಹಾಗೂ ಉನ್ನತಿ ಅಡಗಿದೆ
ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323

