ಬಿಳಿಯೂರು ಸ.ಹಿ.ಪ್ರಾ. ಶಾಲೆಯಲ್ಲಿ ರಕ್ತದಾನ ಶಿಬಿರ

0
56

ಸ್ಪಂದನಾ ಯುವತಿ ಮಂಡಳಿ(ರಿ) ಬಿಳಿಯೂರು ಮತ್ತು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು(ಲೇಡಿಗೋಷನ್ ಆಸ್ಪತ್ರೆ) ಇವರುಗಳ ಜಂಟಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಪೆರ್ನೆ- ಕರ್ವೇಲು ಮತ್ತು ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಿಳಿಯೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪೆರ್ನೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ 15 ಕ್ಕೂ ಹೆಚ್ಚು ಸದಸ್ಯರು ಪೂಜ್ಯ ಖಾವಂದರಾದ ಡಾ|| ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಷದ ಸವಿನೆನಪಿಗಾಗಿ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಕರ್ವೇಲು ಒಕ್ಕೂಟದ ಅಧ್ಯಕ್ಷರಾದ ಮಹೇಶ್ ಪಡಿವಾಲ್, ವಲಯ ಮೇಲ್ವಿಚಾರಕಿ ಶಾರದಾ ಎ, ಸೇವಾಪ್ರತಿನಿಧಿ ರೇಶ್ಮಾ ಶೆಟ್ಟಿ, ಶೌರ್ಯ ಘಟಕದ ಸ್ವಯಂ ಸೇವಕರಾದ ಸುರೇಶ್ ನೂಜೆ, ರಮೇಶ್ ನಾಯ್ಕ ತೋಟ, ಗೋಪಾಲ ಸಪಲ್ಯ, ಕೃಷ್ಣಪ್ಪ ಮಡಿವಾಳ, ಕೃಷ್ಣಪ್ಪ ನಾಯ್ಕ, ಮಮತಾ, ಸುನಂದ, ರಾಜೇಶ್ ಬೆದ್ರ, ಸುಮತಿ, ಕೃಷ್ಣಪ್ಪ ನಾಯ್ಕ ತೋಟ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here