ಚಿತೇಶ್ ಸಂಗೀತ ಬಳಗ ಸುಳ್ಯ ಇದರ ವತಿಯಿಂದ ಆಯೋಜಿಸಿದ ಸಂಗೀತ ಸ್ಪರ್ಧೆ- ಸೀಸನ್ 4 (ಕರೋಕೆ) ದಿನಾಂಕ 26.10.2025 ರಂದು ಸುಳ್ಯ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಐವರ್ನಾಡಿನ ರಾಜ್ಯ ಪ್ರಶಸ್ತಿ ವಿಜೇತ, ಮುತ್ತು ಕೃಷಿಕ ನವೀನ್ ಚಾತುಬಾಯಿರವರು ಹಾಗೂ ಸಾವಿತ್ರಿ ದೊಡ್ಡಮನೆರವರು ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಐವರ್ನಾಡು ಗ್ರಾಂ.ಪ. ಸದಸ್ಯೆ,ಸುಜಾತ ಪವಿತ್ರಮಜಲು ವಹಿಸಿದ್ದರು. ವೇದಿಕೆಯಲ್ಲಿ ಶಶಿರಾಜ್ ದೈಹಿಕ ಶಿಕ್ಷಣ ಶಿಕ್ಷಕರು ಮಂಗಳೂರು, ಪೂರ್ಣಿಮ ಪೆರ್ಲಂಪಾಡಿ ಉಪಸ್ಥಿತರಿದ್ದರು.
ನಂತರ ನಡೆದ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅನೇಕ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು. 60 ದಾಟಿದ ಹಿರಿಯರು ಹಾಗೂ ಪುಟ್ಟ ಪುಟ್ಟ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಸ್ಪರ್ಧೆಯಲ್ಲಿ ಹಿರಿಯರ ವಿಭಾಗ ಕಿರಿಯರ ವಿಭಾಗ ಅದರಲ್ಲಿ ಪ್ರಥಮ, ದ್ವಿತೀಯ, ತೃತೀಯ ಎಂದು ವಿಂಗಡಿಸಲಾಗಿತ್ತು.
ಪ್ರತಿಭಾವಂತರಾದ ಸುರೇಶ್ ರಾವ್ ಮಂಗಳೂರು, ಹರ್ಷಿತ ಐವರ್ನಾಡು, ಧನ್ವಿ ರೈ ಪಾಣಜೆ ಹಾಗೂ ಸೌರವ್ ವಿಟ್ಲ ಇವರಿಗೆ ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮವನ್ನು ಸಮಾರೋಪ ಸಮಾರಂಭದ ವೇಳೆ ನೆರವೇರಿಸಲಾಯಿತು. ಈ ಸಮಾರಂಭದಲ್ಲಿ ಮೋಹನ್ ನಂಗಾರು, ಶಿವರಾಮ ನೆಕ್ರಪ್ಪಾಡಿ, ಭೀಮಾರಾವ್ ವಾಷ್ಠರ್, ಮತ್ತು ವಿಜಯಕುಮಾರ್ ಸುಳ್ಯ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ನವೀನ್ ಬಾಂಜಿಕೋಡಿ ಅವರು ಅದ್ಭುತವಾಗಿ ನಿರ್ವಹಿಸಿದರು. ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಯಶಸ್ವಿಯಾಗಲು ರೋಹಿತ್ ಬಾಂಜಿಕೋಡಿ, ಪ್ರಸಾದ್ ಕೆಮ್ಮಿಂಜೆ, ಗಾಯಕರಾದ ರಾಜೇಶ್ ಎಸ್.ಎನ್., ಗಾಯಕಿಯರಾದ ಪುಷ್ಪಾವತಿ, ಶುಭ ರೈ (ಪುತ್ತೂರು), ಅರುಣ್ ರಾವ್ (ಸುಳ್ಯ) ಹಾಗೂ ಅಮಿತಾ ಐವರ್ನಾಡು ತಮ್ಮ ಸಹಕಾರ ನೀಡಿದರು.

