ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ಆಶ್ರಯದಲ್ಲಿ 15ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ

0
62

ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಬೆಳಾಲು ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 15 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವನ್ನು ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇದರ ವ್ಯವಸ್ಥಾಪನ ಸಮಿತಿಯ ಗೌರವ ಸಲಹೆಗಾರರಾದ ಉದಿತ್ ಕುಮಾರ್ ಜೈನ್ ಇವರು ದೀಪ ಬೆಳಗಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಅನಂತೇಶ್ವರ ಫ್ರೆಂಡ್ಸ್ ಇದರ ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ ಪೂಜಾರಿ ಬಾಯ್ತರಡ್ಡ ವಹಿಸಿದ್ದರು.ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ಗೌಡ,ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುನೀತಾ ಸೋಮನಾಥ್ ನಾಯ್ಕ ಸೀನಿಯರ್ ಸೂಪರ್ವೈಸರ್ ಪ್ರಧಾನ ಅಂಚೆ ಕಛೇರಿ ಮಂಗಳೂರು, ಪ್ರಜೇಶ್ ಕೆ ಜೆ ಕಾರ್ಯದರ್ಶಿ ತುಳುನಾಡ ತುಳುವೆರ್(ರಿ). ಸುರತ್ಕಲ್ ಮಂಗಳೂರು, ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಡಿ ಪುಷ್ಪಗಿರಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿದ್ಯಾಶ್ರೀನಿವಾಸ್ ಗೌಡ,ದೇವಸ್ಥಾನದ ಅರ್ಚಕರಾದ ಸಂಪತ್ ಕುಮಾರ್, ಅನಂತೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಸಂತೋಷ್ ನಾಯ್ಕ ಕುದ್ದoಟೆ,ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷರಾದ ಹರೀಶ್ ಪೂಜಾರಿ ಪೋಸೊಟ್ಟು,ಅನಂತೇಶ್ವರ ಫ್ರೆಂಡ್ಸ್ ಇದರ ಕಾರ್ಯದರ್ಶಿಯಾದ ಹರ್ಷಿತ್ ಗೌಡ ಎರ್ಧೊಟ್ಟು ಉಪಸ್ತಿತರಿದ್ದರು. ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿ, ಗಿರೀಶ್ ಗೌಡ ಮಂಜೋತ್ತು ಕಾರ್ಯಕ್ರಮ ನಿರೂಪಿಸಿದರು. ನವನೀತ್ ಗೌಡ ಏರ್ಧೊಟ್ಟು ವಂದಿಸಿದರು. ನಂತರ ಕ್ರೀಡಾಭಿಮಾನಿಗಳಿಗೆ ಕೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

LEAVE A REPLY

Please enter your comment!
Please enter your name here