ಬೆಲೆ ಏರಿಕೆ – ಕಾನೂನು ತೊಡಕಿನಿಂದ ಕಟ್ಟಡ ಕ್ಷೇತ್ರ ಕುಸಿತ

0
62

ನಿವೇಶನ, ಕಟ್ಟಡ ಸಾಮಗ್ರಿ, ಕಾರ್ಮಿಕರ ಕೂಲಿ ಏರಿಕೆ ಮತ್ತು ಕಾನೂನುಗಳ ಗೊಂದಲದಿAದ ಜನರ ಕನಸಿನ ಮನೆ ಅಸಾಧ್ಯವಾಗಿದೆ. ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರ ಗಂಬೀರ ಸಂಕಷ್ಟದಲ್ಲಿದೆ. ಕೃಷಿ ಕ್ಷೇತ್ರದ ನಂತರ ಅತಿದೊಡ್ಡ ಉದ್ಯೋಗಾವಕಾಶ ಒದಗಿಸುವ ಮತ್ತು ಹಣಕಾಸಿನ ವಹಿವಾಟ ಇರುವ ಸಿವಿಲ್ ಇಂಜಿನಿಯರಿAಗ್ ಕಟ್ಟಡ ನಿರ್ಮಾಣ ಕ್ಷೇತ್ರ ಈಗ ಬೆಲೆ ಏರಿಕೆ ಹಾಗೂ ಕಾನೂನು ತೊಡಕುಗಳಿಂದ ಕುಸಿತ ಅನುಭವಿಸುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿದ್ದು, ಕಟ್ಟಡ ಸಾಮಗ್ರಿಗಳು ದುಬಾರಿಯಾಗಿವೆ. ಕಾರ್ಮಿಕರ ಕೂಲಿ ಏರಿಕೆ ಇಂದ ಸಾಮಾನ್ಯ ನಾಗರಿಕರಿಗೆ ತಮ್ಮ ಕನಸಿನ ಮನೆಯನ್ನು ಕಟ್ಟುವುದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ.
ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ಆದೇಶ ಕಟ್ಟಡ ಮಾಲೀಕರಿಗೆ ತಲೆನೋವು ಆಗಿದೆ. ಹೂಸದಾಗಿ ಕಟ್ಟಿಸಿದ ಕಟ್ಟಡಗಳಿಗೆ ನಗರಪಾಲಿಕೆಯಿಂದ ಕಟ್ಟಡ ಪೂರ್ಣಗೊಂಡ ಪ್ರಮಾಣಪತ್ರ (ಅಅ) ಹಾಗೂ ವಾಸೋಪಯೋಗ ಪ್ರಮಾಣಪತ್ರ (ಔಅ) ಪಡೆದಿದ್ದಲ್ಲಿ ಮಾತ್ರ ವಿದ್ಯುತ್ ಸಂಪರ್ಕ (ಪರ್ಮನೆಂಟ್ ಮೀಟರ್) ನೀಡಬೇಕು ಎಂದು ತೀರ್ಪ ನೀಡಲಾಗಿ. ಈ ಪ್ರಮಾಣಪತ್ರವಿಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು ಎಂಬ ಆದೇಶದಿಂದ ನಾಗರಿಕರಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸುಮಾರು ಹತ್ತು ತಿಂಗಳಿನಿAದ ವಿದ್ಯುತ್ ಸಂಪರ್ಕ ಇಲ್ಲದೆ ನೊಂದು ಬೆಂದ ಜನರಿಗೆ ನಿಟ್ಟುಉಸಿರು ಬಿಟ್ಟಂತೆ ಆಗಿದೆ. ಜನರ ಅಸಮಾಧಾನವನ್ನು ಗಮನಿಸಿದ, ಕರ್ನಾಟಕ ಸರ್ಕಾರವು ಅಕ್ಟೋಬರ್ 24. 2025 ರಂದು 1200 ಚದರ ಅಡಿ ವಾಸದ ಕಟ್ಟಡಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಿದೆ. ಆದರೆ 1200 ಚದರ ಅಡಿ ಮೇಲ್ಪಟ್ಟು ಕಟ್ಟಿಸಲಾದ ಮನೆಗಳು ಹಾಗೂ ಅಪಾರ್ಟ್ಮೆಂಟ್‌ಗಳು ಹಾಗು ಅನೇಕ ಕಟ್ಟಡಗಳು ಇದರಿಂದ ಮಾಲಿಕರು ಹಣ ಮತ್ತು ನೆಮ್ಮದಿ ಕಳದುಕೊಂಡು ಇನ್ನೂ ಸಂಕಷ್ಟದಲ್ಲೇ ಇದ್ದಾರೆ.
ಸಾರ್ವಜನಿಕರಿಗೆ “ಮೂಲಭೂತ ಸೌಕರ್ಯ ನೀಡುವುದು ಸರ್ಕಾರದ ಕರ್ತವ್ಯ” ನಾಗರಿಕರ ಅಭಿಪ್ರಾಯದಲ್ಲಿ, ನೀರು, ವಿದ್ಯುತ್, ಶೌಚಾಲಯ ಮತ್ತು ನಿವಾಸವು ಮನುಷ್ಯನ ಮೂಲಭೂತ ಹಕ್ಕುಗಳು. ಹೊಸದಾಗಿ ಕಟ್ಟಲಿರುವ ಕಟ್ಟಡಗಳಿಗೆ ಹೊಸ ನಿಯಮ ಅನ್ವಯಿಸಬಹುದು, ಆದರೆ ಈಗಾಗಲೇ ಕಟ್ಟಡ ಕಟ್ಟಿ ಪೂರ್ಣಗೊಂಡ ಕಟ್ಟಡಗಳಿಗೆ ವಿದ್ಯುತ್ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಇರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದೆ ಇರುವುದು ದೊಡ್ಡ ದುರಂತ ಮತ್ತು ಅನ್ಯಾಯಕರ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಜ್ಞರ ಅಭಿಪ್ರಾಯದಲ್ಲಿ, ಸಣ್ಣ ಮನೆಗಳು, ದೊಡ್ಡ ಅಪಾರ್ಟ್ಮೆಂಟ್‌ಗಳು, ಸಣ್ಣ ಪಟ್ಟಣಗಳು ಮತ್ತು ಮಹಾನಗರಗಳಿಗೆ ಒಂದೇ ನಿಯಮ ಅನ್ವಯಿಸುವುದು ತಾಂತ್ರಿಕವಾಗಿ ಅಸಾಧ್ಯ, ಅಪ್ರಯೋಗಿಕ ಮತ್ತು ಅವೃಜ್ಞಾನಿಕ. ಸ್ಥಳೀಯ ಅಗತ್ಯತೆ ಮತ್ತು ಜನಸಂಖ್ಯೆಯ ಆಧಾರದ ಮೇಲೆ ವಿಭಿನ್ನ ಮಾರ್ಗಸೂಚಿ ರೂಪಿಸುವುದು ಅಗತ್ಯ. ಇತ್ತೀಚೆಗೆ ಬೆಂಗಳೂರಿನ ನಾಗರಿಕರಿಗೆ ಬಿ- ಖಾತೆಯಿಂದ ಎ- ಖಾತೆಗೆ ಪರಿವರ್ತನೆ ಮಾಡಲು ಸರ್ಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಉಳಿದ ನಗರಗಳ ನಾಗರಿಕರಿಗೆ ಈ ಸೌಲಭ್ಯ ಇನ್ನೂ ದೊರಕಿಲ್ಲ. ಇದರಿಂದ ಸಂಕಷ್ಟದಲ್ಲಿ ಇರುವ ಉಳಿದ ನಗರಗಳಿಗೂ ಇದೇ ಸೌಲಭ್ಯ ನೀಡಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಶೀಘ್ರದಲ್ಲಿ ಈ ಸೌಲಭ್ಯ ರಾಜ್ಯದ ಎಲ್ಲಾ ನಗರಗಳಿಗೂ ಅನುಮತಿ ನೀಡಲಿ.
ಇತ್ತೀಚೆಗೆ ಒಂದಾದ ಮೇಲೆ ಒಂದು ಹೊಸ ಹೊಸ ಯೋಜನೆ ಮತ್ತು ಕಾನೂನುಗಳು ಜಾರಿಯಾಗಿವೆ. ಇ-ಸೊತ್ತು, ಒಸಿ-ಸಿಸಿ, ಎ-ಬಿ ಖಾತೆ, ವಿದ್ಯುತ್ ಸಂಪರ್ಕ ನಿಯಮಗಳು ಮುಂತಾದ ಹೊಸ ಕಾನೂನುಗಳಿಂದ ನಾಗರಿಕರು ಗೊಂದಲಕ್ಕೀಡಾಗಿದ್ದಾರೆ. ನಿಯಮಗಳ ಜಟಿಲ ಪ್ರಕ್ರಿಯೆಯಿಂದ ಅನೇಕ ಕಟ್ಟಡ ಮಾಲೀಕರು, ನಿರ್ಮಾಣ ಕಾರ್ಮಿಕರು ಮತ್ತು ವ್ಯಾಪಾರಿಗಳು ಕಟ್ಟಡ ಸಾಮಗ್ರಿ ವಿತರಕರು ನಷ್ಟ ಅನುಭವಿಸುತ್ತಿದ್ದಾರೆ.
ಕಟ್ಟಡ ಕ್ಷೇತ್ರದ ಕುಸಿತದಿಂದ ಸರ್ಕಾರ, ಮಹಾನಗರಪಾಲಿಕೆ, ಬೆಸ್ಕಾಂ, ಬ್ಯಾಂಕಿAಗ್ ಹಾಗೂ ಕೈಗಾರಿಕಾ ವಲಯಗಳಿಗೆ ದಿನದಿಂದ ದಿನಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗುತ್ತಿದೆ. ಕಾರ್ಮಿಕರು ಉದ್ಯೋಗವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಸಂಕಷ್ಟದಲ್ಲಿ ಇದ್ದಾರೆ.
ಈ ಎಲ್ಲಾ ಸಾರ್ವಜನಿಕರ ಸಮಸ್ಯೆಗಳಿಗೆ ಅಡಳಿತ ಸರ್ಕಾರಕ್ಕೆ ತುರ್ತು ಕ್ರಮ ಕೈಗೊಳ್ಳಲೇಬೇಕು. ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಪುನಃ ಚುರುಕುಗೊಳಿಸಿ ಆರ್ಥಿಕ ಸ್ಥಿತಿ ಅಭಿವೃದ್ದಿ ಪಡಿಸಲಿ ಹಾಗೂ ನಾಗರಿಕರ ಕನಸಿನ ಮನೆಯ ಸಮಸ್ಯೆಗೆ ಶಾಶ್ಚತ ಪರಿಹಾರ ಒದಗಿಸಲು ಸರ್ಕಾರವು ಶೀಘ್ರದಲ್ಲೇ ಸೂಕ್ತ ಮಾರ್ಗ ಕಂಡುಹಿಡಿಯಬೇಕಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರವು ರಾಜ್ಯದ ಆರ್ಥಿಕ ಚಟುವಟಿಕೆಯ ಪೂರಕ ಶಕ್ತಿ. ಈ ಕ್ಷೇತ್ರ ಕುಸಿದರೆ ಸರ್ಕಾರಕ್ಕೂ, ನಾಗರಿಕರಿಗೂ ನಷ್ಟ ಅನಿವಾರ್ಯ. ಸರ್ಕಾರವು ಜನರ ಹಿತಾಸಕ್ತಿಯನ್ನು ಕಾಪಾಡಿ, ಕಾನೂನು ಶಿಸ್ತಿನೊಂದಿಗೆ ಪ್ರಾಯೋಗಿಕ ಪರಿಹಾರ ರೂಪಿಸಲೇಬೇಕು.

ಹೆಚ್.ವಿ.ಮಂಜುನಾಥ ಸ್ವಾಮಿ
ಸಿವಿಲ್ ಇಂಜನೀಯರ್
9844882360

LEAVE A REPLY

Please enter your comment!
Please enter your name here