ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿಯಲ್ಲಿ “ವಾಯ್ಸ್ ಆಫ್ ಅರಾಧನಾ ಸಂಸ್ಥೆ”ಯ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ನವೆಂಬರ್ 1, 2025 ರಂದು ಭವ್ಯವಾಗಿ ನಡೆಯಲಿದೆ.
ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ಯುಗಪುರುಷ ಸಭಾಭವನದಲ್ಲಿ ಪ್ರಾರಂಭವಾಗಲಿದ್ದು, ದೇವಪ್ರಸಾದ್ ಪುನರೂರು (ಅಧ್ಯಕ್ಷ, ಪುನರೂರು ಪ್ರತಿಷ್ಠಾನ) ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಪದ್ಮನಾಭ ಭಟ್ ಎಕ್ಕಾರು (ಹಿರಿಯ ಸಾಹಿತಿ) ಅವರು ಮುಖ್ಯ ಅತಿಥಿಯಾಗಿರಲಿದ್ದು, “ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಮ್ಮ ಪಾತ್ರ” ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ರಾಜ್ಯೋತ್ಸವ ಗೌರವಾರ್ಪಣೆಯನ್ನು ಡಾ. ಶಿವಾನಂದ ಪ್ರಭು (ತಜ್ಞ ವೈದ್ಯರು, ದುರ್ಗಾಸಂಜೀವನಿ ಮಣಿಪಾಲ್ ಆಸ್ಪತ್ರೆ, ಕಟೀಲು) ನೀಡಲಿದ್ದಾರೆ.
ಈ ಸಂದರ್ಭದಲ್ಲಿ ಅಗರಿ ರಾಘವೇಂದ್ರ ರಾವ್ ಅಗರಿ ಎಂಟರ್‌ಪ್ರೈಸಸ್, ಸುರತ್ಕಲ್, ಪದ್ಮಶ್ರೀ ಭಟ್ ಅಧ್ಯಕ್ಷೆ, ಕರ್ನಾಟಕ ಜನಪದ ಪರಿಷತ್ ಮೂಡಬಿದ್ರೆ ತಾಲೂಕು ಘಟಕ) ಹಾಗೂ ಸಾಣೂರು ಅರುಣ್ ಶೆಟ್ಟಿಗಾರ್ ಉದ್ಯಮಿ ಉಪಸ್ಥಿತಿತರಿರಲಿರುವರು.
ಈ ಸಂದರ್ಭದಲ್ಲಿ “ವಾಯ್ಸ್ ಆಫ್ ಅರಾಧನಾ” ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಯುಗಪುರುಷ ಕಿನ್ನಿಗೋಳಿಯ ಪ್ರಧಾನ ಸಂಪಾದಕರಾದ ಕೋಡೆತ್ತೂರು ಭವನಾಭಾರಾಮ ಉಡುಪ ಅವರು ಎಲ್ಲರನ್ನೂ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

