ಪುತ್ತೂರು: ನಾರಾಯಣ ಕುಂಬ್ರ ರಚನೆಯ “ಮೊಳಗಲಿ ಕನ್ನಡದ ಕಹಳೆ” ಆಲ್ಬಮ್ ಗೀತೆಯ ಪೋಸ್ಟರ್ ಬಿಡುಗಡೆ ಉದಯೋನ್ಮುಖ ಯುವ ಸಾಹಿತಿ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾಗಿರುವ ನಾರಾಯಣ ಕುಂಬ್ರ ಇವರು ರಚಿಸಿರುವ ಮೊಳಗಲಿ ಕನ್ನಡದ ಕಹಳೆ ಆಲ್ಬಮ್ ಗೀತೆಯ ಪೋಸ್ಟರ್ ಬಿಡುಗಡೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆಯಿತು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಇವರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಹಿರಿಯ ಸಾಹಿತಿಗ ನಾರಾಯಣ ರೈ ಕುಕ್ಕುವಳ್ಳಿ, ಅಧ್ಯಾಪಕರಾದ ಶ್ವೇತ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಯಶೋಧ ಬಲ್ನಾಡ್, ಕವಿತ ಸತೀಶ್ ಗಿರೀಶ್ ಕೊಯಿಲ ಕುಮಾರಿ ಆರ್ನವಿ, ಕುಮಾರಿ ದೀಪಶ್ರೀ ಹಾಗೂ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ಉಪಸ್ಥಿತರಿದ್ದರು.

