ಬಲಿಪ ಭಾಗವತ ಪ್ರಶಸ್ತಿ 2025

0
98


ವರದಿ ರಾಯಿ ರಾಜ ಕುಮಾರ
ಕೀರ್ತಿ ಶೇಷ ಬಲಿಪ ಭಾಗವತದ್ರ ಪುಣ್ಯ ಸ್ಮ್ರತಿ ಹಾಗೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ನವೆಂಬರ್ 2 ರಂದು ಸಂಜೆ 4 ಗಂಟೆಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಬಲಿಪ ಭಾಗವತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಬಲಿಪ ಭಾಗವತ ಪ್ರಶಸ್ತಿಯನ್ನು ಹಿಮ್ಮೇಳವಾದಕ ಪೆರವಾಯಿ ನಾರಾಯಣ ಭಟ್ ಅವರಿಗೆ ನೀಡಲಾಗುವುದು. ಸ್ಥಳೀಯ ಮುಂದಾಳುಗಳು ಈ ಸಂದರ್ಭದಲ್ಲಿ ಹಾಜರಿರುತ್ತಾರೆ. ತರುವಾಯ ಗುರುದಕ್ಷಿಣೆ ಎಂಬ ಯಕ್ಷಗಾನ ತಾಳಮದ್ದಳೆ, ಜರುಗಲಿದೆ ಎಂದು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here