ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

0
46

ವರದಿ- ರಾಯಿ ರಾಜ ಕುಮಾರ

ಕರಾವಳಿ ಕರ್ನಾಟಕ, ಚಿಕ್ಕಮಗಳೂರು, ಕೊಡಗು, ಹಾಸನ ಇತ್ಯಾದಿ ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್‌ ಪೀಠ ಸ್ಥಾಪಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿಯನ್ನು ಅಕ್ಟೋಬ‌ರ್ 28ರಂದು ಮಂಗಳೂರಿನಲ್ಲಿ ಅರ್ಪಿಸಲಾಯಿತು. ಮನವಿಯನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಸಮಿತಿಯ ವರದಿ ತಿಳಿಸಿದೆ. ಮನವಿ ಅರ್ಪಣೆಯ ಸಮಿತಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜಾ, ಹೈಕೋರ್ಟ್‌ ಪೀಠ ಸ್ಥಾಪನೆಯ ಸಮಿತಿಯ ಅಧ್ಯಕ್ಷ ಎಚ್‌ವಿ ರಾಘವೇಂದ್ರ, ಕಾರ್ಯದರ್ಶಿ ಶ್ರೀಧ‌ರ್ ಎಚ್‌, ವಕೀಲರ ಸಂಘದ ಕಾರ್ಯದರ್ಶಿ ನರೇಂದ್ರನಾಥ ಭಂಡಾರಿ, ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ, ಹಿರಿಯ ವಕೀಲರುಗಳಾದ ಆಶಾ ನಾಯಕ್, ಜಯಪ್ರಕಾಶ್, ಜಗದೀಶ್, ವಿಕ್ರಂ ರಾಜ್, ಪ್ರವೀಣ್ ಅದ್ಯಪಾಡಿ, ಕಿರಣ್ ಕುಮಾ‌ರ್ ಹಾಗೂ ಇತ್ಯಾದಿಯರು ಹಾಜರಿದ್ದರು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here