ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಅಭಿವೃದ್ಧಿಗೆ ಸಂಬಂಧಪಟ್ಟ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಅಕ್ಟೋಬರ್ 28ರಂದು ನೆರವೇರಿತು. ಶಾಸಕ ಉಮಾನಾಥ ಕೋಟ್ಯಾನ್ ಈ ಎಲ್ಲ ಕಾರ್ಯಕ್ರಮಗಳನ್ನು ಉದ್ಘಾಟಿಸಿ, ಗುದ್ದಲಿ ಪೂಜೆ ನೆರವೇರಿಸಿದರು. ಒಣ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಘಟಕಕ್ಕೆ ಅಗತ್ಯ ಇರುವ ವಸ್ತುಗಳನ್ನು ಒದಗಣೆ ಮತ್ತು ವಿವಿಧ ಅನುದಾನದ ಉಪಯೋಗಗಳಿಂದ ಯುಕ್ತ ಬಳಕೆಗೆ ಬಳಸಿಕೊಳ್ಳುವ ಕಾಮಗಾರಿಯ ಶಿಲಾನ್ಯಾಸವನ್ನು ನೆರವೇರಿಸಿದರು.

ಜ್ಯೋತಿನಗರ ಸ್ಮಶಾನ ಅಭಿವೃದ್ಧಿಗಾಗಿ 7 ಲಕ್ಷ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿದರು. 22ನೇ ವಾರ್ಡ್ ಮಾರೂರು ಗ್ರಾಮದ ಮೇಲಂದ ಗುಡ್ಡೆ, ಮಂಜುಶ್ರೀ ನಗರದ 2ಲಕ್ಷ ವೆಚ್ಚದ ಸಾರ್ವಜನಿಕ ಬಸ್ಸುತಂಗುದಾಣ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸ್ವಾತಿ ಪ್ರಭು, ಮುಖ್ಯಾಧಿಕಾರಿ ಇಂದು ಎಂ, ಜನಪ್ರತಿನಿಧಿಗಳಾದ ರೂಪಾ ಶೆಟ್ಟಿ, ಕೊರಗಪ್ಪ, ಸೌಮ್ಯ, ಸುಜಾತ, ಮಮತಾ, ಪ್ರಸಾದ್ ಕುಮಾರ್, ಪಿಕೆ ತೋಮಸ್, ಜ್ಯೊಸ್ಸಿ ಮಿನೇಜಸ್, ಎ.ಇ. ನಳಿನ್ ಕುಮಾರ್ ಹಾಗೂ ಇತರರು ಹಾಜರಿದ್ದರು.

