ಸುರತ್ಕಲ್‌: ಯುವತಿ ನಾಪತ್ತೆ

0
143

ಸುರತ್ಕಲ್‌: ಕೃಷ್ಣಾಪುರ ನಿವಾಸಿ ಅನನ್ಯ(20) ಎಂಬವರು ಕಾಣೆಯಾಗಿದ್ದು, ಕಾರ್ತಿಕ್ ಎಂಬವರನ್ನು ಪ್ರೀತಿಸುತ್ತಿದ್ದು, ಮನೆಯವರು ಆಕ್ಷೇಪ ವ್ಯಕ್ತ ಪಡಿಸಿದ್ದರಿಂದ ಅವರು ಮನೆಯಲ್ಲೇ ಇದ್ದರು.
ಅಕ್ಟೋಬರ್ 25 ರಂದು ತಂದೆ ತಾಯಿ ಕೆಲಸದ ನಿಮಿತ್ತ ಮನೆಯಿಂದ ಹೋಗಿದ್ದು, ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಮಗಳು ಇಲ್ಲದೇ ಇದ್ದು ಆಸುಪಾಸಿನಲ್ಲಿ ವಿಚಾರಿಸಿಕೊಂಡಾಗ ಅನನ್ಯಳು ಬೆಳಿಗ್ಗೆ ಮನೆಯಿಂದ ಹೋಗಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಸುರತ್ಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ:- ಎತ್ತರ: 5.3 ಅಡಿ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಶರೀರ, ದಪ್ಪ ಸೈಝ್ ಕನ್ನಡಕ ಮತ್ತು ಕಾಣೆಯಾದ ದಿನ ಕೆಂಪು ಬಣ್ಣದ ಟೀ ಶರ್ಟ್, ಹಳದಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here