ವರದಿ ರಾಯಿ ರಾಜ ಕುಮಾರ
ಉಡುಪಿ ಪುರಸಭೆಯ ಸ್ವರ್ಣ ಆರ್ಕೆಡ್ ರೆಸಿಡೆನ್ಸಿ ರಸ್ತೆ ಅಥವಾ ಉಡುಪಿ ರೆಸಿಡೆನ್ಸಿ ರಸ್ತೆಯ ಪರಿಸ್ಥಿತಿ ಅಯೋಮಯವಾಗಿದೆ. ಅಲ್ಲಿಯ ವ್ಯಾಪಾರಿಗಳು ಕಳೆದ ಒಂದು ತಿಂಗಳಿಂದ ಉಡುಪಿ ಪುರಸಭೆಯ ದೀಪಾವಳಿಯ ಕೊಡುಗೆಗೆ ಬರಪೂರ ಸಂತಸಪಟ್ಟಿದ್ದಾರೆ.

ದೀಪಾವಳಿ ಪ್ರಾರಂಭಕ್ಕೆ ಒಂದು ವಾರ ಮೊದಲೇ ರಸ್ತೆಯನ್ನು ಅಗೆದು ಮಣ್ಣುಗಳನ್ನು ಬದಿಯಲ್ಲಿ ರಾಶಿ ಹಾಕಿ ಜಲ್ಲಿಯನ್ನು ಹಾಕಿ ಬಿಟ್ಟಿರುತ್ತಾರೆ. ಕಳೆದ ಒಂದು ತಿಂಗಳಿಂದ ಯಾವುದೇ ರೀತಿಯ ಪ್ರಗತಿಯಾಗದೆ ಸ್ಥಳೀಯ ವ್ಯಾಪಾರಸ್ಥರು, ನಾಗರಿಕರು ತೊಂದರೆಗೆ ಒಳಗಾಗಿರುತ್ತಾರೆ. ಬಸ್ಸು ನಿಲ್ದಾಣವನ್ನು ಟೆಲಿಫೋನ್ ಎಕ್ಸ್ಚೇಂಜ್ ರಸ್ತೆಗೆ ಸಂಪರ್ಕಿಸುವ ಈ ಸ್ವರ್ಣ ಆರ್ಕೇಡ್ ರೆಸಿಡೆನ್ಸಿ ರಸ್ತೆ ಅಥವಾ ಉಡುಪಿ ರೆಸಿಡೆನ್ಸಿ ರಸ್ತೆ ಮುಚ್ಚಲ್ಪಟ್ಟಿದ್ದು ವಾಹನಗಳಿಗೆ ಚಲಿಸಲು ಸಾಧ್ಯವಿಲ್ಲದ ರೀತಿಯಲ್ಲಿ ಪರಿವರ್ತಿತವಾಗಿದೆ.

ಈ ಬಗ್ಗೆ ವ್ಯಾಪಾರಸ್ಥರು ಹಾಗೂ ನಾಗರಿಕರು ಪುರಸಭೆಯ ನಿಧಾನ ಕಾಮಗಾರಿಗೆ ಆಕ್ರೋಶ ವ್ಯಕ್ತಪಡಿಸಿರುತ್ತಾರೆ.

