ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ : ರಾಜ್ಯದ ಹದಿಮೂರು ಕಡೆಗಳಲ್ಲಿ ೨೦೦೦ನೇ ಮದ್ಯವರ್ಜನ ಶಿಬಿರ ಇಂದಿನಿಂದ ಆಡ್ಮಿಷನ್‌

0
94

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಇಂದಿನಿAದ (ಅ.೩೦) ರಾಜ್ಯದ ಹದಿಮೂರು ಕಡೆಗಳಲ್ಲಿ ೨೦೦೦ನೇ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ ಎಂದು ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷರಾದ ನಟರಾಜ್ ಬಾದಾಮಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಮತ್ತು ರಾಜ್ಯ ಕಾರ್ಯದರ್ಶಿಯವರಾದ ವಿವೇಕ್ ವಿ. ಪಾÊಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳ್ತಂಗಡಿ, ಮೂಡಬಿದ್ರೆ, ಮಂಗಳೂರು, ಉಡುಪಿ, ಗುಬ್ಬಿ, ಮಧುಗಿರಿ, ಧಾರವಾಡ, ಬಸವಕಲ್ಯಾಣ, ಶ್ರೀರಂಗ ಪಟ್ಟಣ, ಅರಸೀಕೆರೆ, ಗದಗ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿ ಅ. ೩೦ ರಿಂದ ನ.೬ರ ವರೆಗೆ ಪ್ರತಿ ಶಿಬಿರದಲ್ಲಿ ತಲಾ ೭೬ ರಂತೆ ಶಿಬಿರಾರ್ಥಿಗಳನ್ನು ಸೇರಿಸಿ ಒಂದು ಸಾವಿರ ವ್ಯಸನಿಗಳಿಗೆ ಮನಪರಿವರ್ತನೆ ಮೂಲಕ ವ್ಯಸನಮುಕ್ತರಾಗಿ ಮಾಡುವ ಗುರಿ ಹೊಂದಲಾಗಿದೆ.
ಈವರೆಗೆ ೧೯೮೭ ಮದ್ಯವರ್ಜನ ಶಿಬಿರಗಳ ಮೂಲಕ ಒಂದು ಲಕ್ಷದ ಮೂವತ್ತಮೂರು ಸಾವಿರ ಮದ್ಯವ್ಯಸನಿಗಳನ್ನು ಮನಪರಿವರ್ತನೆ ಮೂಲಕ ವ್ಯಸನಮುಕ್ತರಾಗಿ ಮಾಡಲಾಗಿದೆ ಎಂದು ಅವರು ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here