ಮುದ್ರಾಡಿಯಲ್ಲಿ ಅಭಿನಂದನೆ ಮತ್ತು ಬೀಳ್ಕೊಡುಗೆ ಸಮಾರಂಭ

0
87

ಹೆಬ್ರಿ :ಮುದ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ಮೂವರಿಗೆ ಅಭಿನಂದನೆ ಮತ್ತು ಇಬ್ಬರಿಗೆ ಬೀಳ್ಕೊಡುಗೆ ಸಮಾರಂಭವು ಪಂಚಾಯತ್ ಸಭಾಂಗಣದಲ್ಲಿ ಅಕ್ಟೋಬರ್ 29 ರಂದು ನಡೆಯಿತು.

ಇತ್ತೀಚೆಗೆ ಕರ್ನಾಟಕ ಸರಕಾರ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಮುದ್ರಾಡಿ ಮಂಜುನಾಥ ಪೂಜಾರಿ ಮತ್ತು ಕೇಂದ್ರ ಸರಕಾರ ಸಿ.ಆರ್.ಪಿ.ಎಫ್ ನಲ್ಲಿ ಹೊಸತಾಗಿ ನೇಮಕಗೊಂಡ ಸಬ್ಇನ್ಸ್ಪೆಕ್ಟರ್ ಹುದ್ದೆಯ ಸಮೀತ್ ಹೆಗ್ಡೆ, ಉಡುಪಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿವರಾದ ವಿಜಯ ರವರಿಗೆ ಅಭಿನಂದನೆ ಮತ್ತು ಮುದ್ರಾಡಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಹೆಬ್ರಿ ಗ್ರಾಮ ಕ್ಕೆ ವರ್ಗಾವಣೆ ಗೊಂಡ ನವೀನ್ ಹಾಗೂ ಮುದ್ರಾಡಿ ಗ್ರಾಮ ಪಂಚಾಯತ್ ನಿಂದ ಬೆಳ್ವೆ ಗೆ ವರ್ಗಾವಣೆಗೊಂಡ ಅಮೃತ ಕುಲಾಲ್ ರವರಿಗೆ ಮುದ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಶುಭ ಹಾರೈಸಲಾಯಿತು.

ಅಭಿನಂದನೆ ಸ್ವೀಕರಿಸಿದ ಮಂಜುನಾಥ ಪೂಜಾರಿ ಯವರು ಮಾತನಾಡಿ ನನ್ನ ಯಶಸ್ಸಿಗೆ ಕಾರಣರಾದ ಮುದ್ರಾಡಿಯ ಜನತೆ ಮತ್ತು ಗ್ರಾಮ ಪಂಚಾಯತನ್ನು ಮರೆಯುವಂತಿಲ್ಲ, ಜನರೊಡನೆ ಬೆರೆತು ಉತ್ತಮವಾದ ನನ್ನ ಸೇವೆಗೆ ನಮ್ಮೂರಿನ ಜನ ನನಗೆ ಆಶೀರ್ವಾದ ನೀಡಿದ್ದಾರೆ, ಅದರ ಫಲವೇ ನಾನು ಈ ಮಟ್ಟಕ್ಕೆ ಏರಲು ಸಾಧ್ಯವಾಯಿತು, ಸನ್ಮಾನ ಸ್ವೀಕರಿಸಿದ ಎಲ್ಲರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಎಲ್ಲರೂ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪಂಚಾಯತ್ ಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ದಲ್ಲಿ ಉಪ್ಪಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಂಚಾಯತ್ ವತಿಯಿಂದ ಕ್ರೀಡಾ ಸಾಮಗ್ರಿ ಗಳನ್ನು ವಿತರಿಸಲಾಯಿತು.

ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ. ಎಮ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಂತೋಷ್ ಕುಮಾರ್ ಶೆಟ್ಟಿ ಮತ್ತು ಬಲ್ಲಾಡಿ ಚಂದ್ರ ಶೇಖರ ಭಟ್ ಸನ್ಮಾನಿತರಿಗೆ ಅಭಿನಂದನಾ ಮಾತುಗಳನ್ನಾಡಿದರು, ಉಪಾಧ್ಯಕ್ಷೆ ರಮ್ಯಕಾಂತಿ ಮಾತನಾಡಿ ಸನ್ಮಾನಿತರನ್ನು ಅಭಿನಂದಿಸಿದರು.
ಸಭೆಯ ಅಧ್ಯಕ್ಷ ತೆಯನ್ನು ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ ವಹಿಸಿದ್ದು ಅಧ್ಯಕ್ಷೀಯ ಮಾತುಗಳನ್ನಾಡಿದರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಭಾಸ್ ಖಾರ್ವಿ ಸ್ವಾಗತಿಸಿ, ಪಂಚಾಯತ್ ಸಿಬ್ಬಂದಿ ಪದ್ಮನಾಭ ಕುಲಾಲ್ ನಿರೂಪಿಸಿ, ಕಾರ್ಯದರ್ಶಿ ಶೋಭಾವತಿ ಶೆಟ್ಟಿ ವಂದಿಸಿದರು, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here