ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲಾ ಘಟಕದ ವಾರ್ಷಿಕ ಮಹಾಸಭೆಯು ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಇತ್ತೀಚಿಗೆ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷರಾದ ಬೆಳ್ವೆ ಮುಸ್ತಾಕ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹೀರ್ ನಾಖುದಾ ಗಂಗೊಳ್ಳಿ ಎರಡು ವರ್ಷದ ವರದಿಯನ್ನು ಮಂಡಿಸಿದರು. ಜಿಲ್ಲಾ ಕೋಶಾಧಿಕಾರಿಯಾದ ನಕ್ವಾ ಯಾಹ್ಯಾ ರವರು ಎರಡು ವರ್ಷದ ಲೆಕ್ಕಪತ್ರವನ್ನು ಮಂಡಿಸಿದರು.
2024-25 ನೇ ಸಾಲಿನ ನಿರ್ಗಮಿತ ಅಧ್ಯಕ್ಷರಾದ ಮುಷ್ತಾಕ್ ಅಹ್ಮದ್ ಬೆಳ್ವೆ ರವರು ತಮ್ಮ ಅಧ್ಯಕ್ಷೀಯ ವಿದಾಯ ಭಾಷಣ ಮಾಡಿದರು. ತ ಮುಂದಿನ 2026-27 ರ ಸಾಲಿನ ನೂತನ ಜಿಲ್ಲಾಧ್ಯಕ್ಷರ ಹಾಗು ಇತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು ಇದರ ವೀಕ್ಷಕರು ಹಾಗೂ ಉಸ್ತುವಾರಿಯನ್ನು ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೌ. ಝಮೀರ್ ಅಹ್ಮದ್ ರಷಾದಿ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಹುಸೈನ್ ಹೈಕಾಡಿ ನೆರವೇರಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಸಲೀಂ ಮತ್ತು ಕೇಂದ್ರ ಸಮಿತಿಯ ಕೋಶಾಧಿಕಾರಿ ಪೀರು ಸಾಹೇಬ್ ಉಡುಪಿ ಉಪಸ್ಥಿತರಿದ್ದರು.

2026-27 ರ ಸಾಲಿನ ನೂತನ ಸಮಿತಿ ಅಧ್ಯಕ್ಷ ರಾಗಿ ನಕ್ವಾ ಯಾಹ್ಯಾ ಮಲ್ಪೆ, ಪ್ರದಾನ ಕಾರ್ಯದರ್ಶಿಯಾಗಿ ಫಾಝಿಲ್ ಆದಿ ಉಡುಪಿ, ಜೊತೆ ಕಾರ್ಯದರ್ಶಿಗಳಾಗಿ ನಿಹಾರ್ ಅಹ್ಮದ್ ಕುಂದಾಪುರ ಮತ್ತು ಅಶ್ರಫ್ ಪಡುಬಿದ್ರಿ, ಕೋಶಾಧಿಕಾರಿಯಾಗಿ ಝಹೀರ್ ಅಹ್ಮದ್ ನಾಖುದಾ ಗಂಗೊಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ಝಫ್ರುಲ್ಲಾಹ್ ಹೂಡೆ, ಉಪಾಧ್ಯಕ್ಷರುಗಳಾಗಿ ಮೊಹಮ್ಮದ್ ರಫೀಕ್ ಗಂಗೊಳ್ಳಿ, ಹಾರೂನ್ ರಶೀದ್ ಸಾಸ್ತಾನ, ನಝೀರ್ ನೇಜಾರು, ಮೊಹಮ್ಮದ್ ಇರ್ಫಾನ್ ಕಾಪು, ಎಂ ಪಿ ಮೊಹಿದಿನಬ್ಬ, ಮುನವ್ವರ್ ಅಜೆಕಾರ್, ಕಾನೂನು ಸಲಹೆಗಾರರಾಗಿ ಮೊಹಮ್ಮದ್ ಸುಹಾನ್ ಸಾಸ್ತಾನ, ಮಾಧ್ಯಮ ಸಲಹೆಗಾರರಾಗಿ ಅಬ್ದುಲ್ ಶುಕೂರ್ ಬೆಳ್ವೆ, ಯುವ ಘಟಕದ ಸಂಯೋಜಕರಾಗಿ ಅಬ್ದುಲ್ ಖಾದರ್ ಮೂಡ್ ಗೋಪಾಡಿ ಹಾಗೂ ಜಿಲ್ಲಾ ಸಲಹೆಗಾರರ ಸಮಿತಿಯ ಸದಸ್ಯರಾಗಿ ಮುಜಾವರ್ ಅಬು ಮೊಹಮ್ಮದ್ ಕುಂದಾಪುರ, ಶಾಬಾನ್ ಹಂಗಳೂರು, ಜಿ ಮೊಹಮ್ಮದ್ ಗುಲ್ವಾಡಿ, ಶಾಕಿರ್ ಶೀಶಾ ಕಾರ್ಕಳ, ಸಯ್ಯದ್ ಅಜ್ಮಲ್ ಶಿರೂರುರವರು ಆಯ್ಕೆಯಾದರು. ಮೊಹಮ್ಮದ್
ರೆಯನ್ ಬೆಳ್ವೆ ರವರು ಕುರಾನ್ ಪಠಣಗೈದು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಹಾರ್ ಅಹ್ಮದ್ ಕುಂದಾಪುರ ಸ್ವಾಗತಿಸಿದರು.
ಜಿಲ್ಲಾ ಉಪಾಧ್ಯಕ್ಷ ಅಬು ಮೊಹಮ್ಮದ್ ಕುಂದಾಪುರ ವಂದಿಸಿದರು ಮೌಲಾನಾ ಜಮೀರ್ ಅಹಮದ್ ರಷಾದಿ ದುವಾಗೈದರು.

