ವರದಿ ರಾಯಿ ರಾಜ ಕುಮಾರ
ಧರ್ಮಸ್ಥಳ ಮಂಜುನಾಥೆಶ್ವರ ಭಜನಾ ಪರಿಷತ್ ನ ಕುಂಭ ಕಂಠಿಣಿ ಭಜನಾ ಮಂಡಳಿ ಯ ವತಿಯಿಂದ ದೀಪಾವಳಿ ಆಚರಣೆ ಮತ್ತು ಸಾಮೂಹಿಕ ಗೋ ಪೂಜೆ, ಮಕ್ಕಳಿಂದ ಭಜನಾ ಸೇವೆ ಮತ್ತು ಮಹಿಳಾ ಮಂಡಳಿಯಿಂದ ಭಜನಾ ಸಂಕೀರ್ತನೆ ನಡೆಯಿತು.
ಧಾರ್ಮಿಕ ಸಭೆಯಲ್ಲಿ ಉಪನ್ಯಾಸಕರಾಗಿ ಸಂತೋಷ್.ಪಿ. ಅಳಿಯೂರು ಜಿಲ್ಲಾ ಸಮನ್ವಯ ಅಧಿಕಾರಿ ಭಜನಾ ಪರಿಷತ್ ಧರ್ಮಸ್ಥಳ ಭಾಗವಹಿಸಿ ಶುಭ ಹಾರೈಸಿದರು.
ಭಜನಾ ಮಂಡಳಿಯ ಸ್ಥಾಪಕ ಅಧ್ಯಕ್ಷರು ಹಾಗೂ ಸಂಚಾಲಕ ಪ್ರವೀಣ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಗತ್ಪಾಲ್ ಹೆಗ್ಡೆ, ದಯಾನಂದ ಪೈ, ಸೂರಜ್ ಜೈನ್, ಅಭಿನಂದನ್ ಬಲ್ಲಾಳ್, ಮಹಿಳಾ ಮಂಡಳಿ ಅಧ್ಯಕ್ಷೆ ಸೌಮ್ಯ ಬಡಕೋಡಿ, ಮುಂತಾದವರು ಹಾಜರಿದ್ದರು.
ಭಜನಾ ಮಂಡಳಿಯು ಈ ವರೆಗೆ 150ಕ್ಕಿಂತಲೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿದೆ.

