ಮಟನ್ ತ್ಯಾಜ್ಯ ಎಸೆದವನಿಗೆ ಬಿತ್ತು 5000 ದಂಡ

0
16

ಚಾರ ಗ್ರಾಮ ಪಂಚಾಯತಿಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ

ಹೆಬ್ರಿ : ಮಟನ್ ಗೆ ಸಂಬಂಧಿಸಿದ ತ್ಯಾಜ್ಯವನ್ನು ಚಾರ ನವೋದಯ ಬ್ರಿಡ್ಜ್ ಬಳಿ ಎಸೆದ ವ್ಯಕ್ತಿಯೊಬ್ಬರಿಗೆ ಚಾರಪಂಚಾಯಿತಿ ವತಿಯಿಂದ ಐದು ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ಗುರುವಾರ ನಡೆದಿದೆ.

ಬಿ ಖಾದರ್ ಎಂಬವರು ಚಾರ ನಿವಾಸಿಯಾಗಿರುತ್ತಾರೆ. ಹೆಬ್ರಿಯಲ್ಲಿ ಮಟನ್ ಅಂಗಡಿ ನಡೆಸುತ್ತಿರುತ್ತಾರೆ. ಬುಧವಾರ ರಾತ್ರಿ ತ್ಯಾಜ್ಯವನ್ನು ಎಸೆಯುವಾಗ ಸ್ಥಳೀಯರಾದ ಬೇಳಂಜೆ ಪಾಂಡುರಂಗ ಪೂಜಾರಿಯವರು ಪ್ರಶ್ನಿಸಿ, ಚಾರ ಗ್ರಾಮ ಪಂಚಾಯಿತಿ ಅವರಿಗೆ ತಿಳಿಸಿದ್ದಾರೆ. ಸಂಬಂಧಪಟ್ಟ ಸಿಬ್ಬಂದಿಗಳು ಬಂದು ಪರಿಶೀಲಿಸಿದಾಗ ತ್ಯಾಜ್ಯ ಎಸೆದಿದ್ದು ತಿಳಿದುಬಂದಿದೆ. ಇದರಿಂದ ಪಂಚಾಯಿತಿಯವರು ಕಠಿಣ ಕ್ರಮ ಕೈಗೊಂಡು ದೊಡ್ಡ ಮೊತ್ತದ ದಂಡವನ್ನು ಸಂಬಂಧಪಟ್ಟವರಿಗೆ ವಿಧಿಸಿದ್ದಾರೆ. ಈ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಚಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ನಿರಂತರವಾಗಿ ಕಿಡಿಗೇಡಿಗಳು ತ್ಯಾಜ್ಯವನ್ನು ಎಸೆದು ಸ್ವಚ್ಛತೆಗೆ ಸವಾಲಾಗಿದ್ದರು. ಪಂಚಾಯತಿಯವರು ಆಗಾಗ ಸಂಬಂಧಪಟ್ಟ ಜಾದು ಹಿಡಿದರು ಕಾದು ಕುಳಿತಿದ್ದರು. ಸದ್ಯಕ್ಕೆ ಸಿಕ್ಕ ವ್ಯಕ್ತಿಗೆ ದೊಡ್ಡ ಮಟ್ಟದ ದಂಡನೆ ಬಿದ್ದಿದೆ.

ಮಾಹಿತಿ ನೀಡಿದವರ ವಿವರ ಗೌಪ್ಯ, ಬಹುಮಾನ : ಚಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಯಾರಾದರೂ ತ್ಯಾಜ್ಯವನ್ನು ಎಸೆದಿರುವ ಬಗ್ಗೆ ಮಾಹಿತಿ ನೀಡಿದರೆ, ಸಂಬಂಧಪಟ್ಟವರ ಮಾಹಿತಿ ಹಾಗೂ ವಿವಾರವನ್ನು ಗೌಪ್ಯವಾಗಿಟ್ಟು ಬಹುಮಾನ ನೀಡಿ ಪುರಸ್ಕರಿಸಲಾಗುವುದೆಂದು ಚಾರ ಗ್ರಾಪಂ ಅಧ್ಯಕ್ಷ ದಿನೇಶ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ದುಪ್ಪಟ್ಟು ದಂಡನೆ : ಈ ವ್ಯಕ್ತಿಗೆ ಕಡಕ್ ವಾರ್ನಿಂಗ್ ನೀಡಿ ದಂಡವಿನಿಸಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಧಕ್ಕೆ ತರುವವರ ವಿರುದ್ಧ ದುಪ್ಪಟ್ಟು ದಂಡನೆಯನ್ನು ವಿಧಿಸಿ ಕಾನೂನು ಕ್ರಮ ಜರುಗಿಸುತ್ತೇವೆ . ದಯಮಾಡಿ ಎಲ್ಲರೂ ಸಹಕಾರ ನೀಡಬೇಕು ಎಂದು ಚಾರ ಪಂಚಾಯಿತಿ ಅವರ ಮನವಿ ಮಾಡಿದ್ದಾರೆ.

ಚಾರದ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಮಾಧ್ಯಮಗಳು ನಿರಂತರವಾಗಿ ಗಮನಸೆಳೆಯುತ್ತಿದ್ದವು.

ಹೆಬ್ರಿ ತಾಲೂಕಿನಲ್ಲಿ ಅನೇಕ ಕಡೆ ತ್ಯಾಜ್ಯ ಎಸೆಯುತ್ತಾರೆ : ತಾಲೂಕಿನ ಅನೇಕ ಕಡೆಯಲ್ಲಿ ನಿರಂತರವಾಗಿ ತ್ಯಾಜ್ಯ ಎಸೆಯುವ ಚಾಳಿ ಮುಂದುವರೆದಿದೆ. ಕೋಳಿ ತ್ಯಾಜ್ಯ, ಹೋಟೆಲ್ ತ್ಯಾಜ್ಯ, ಮನೆ ಸಾಮಗ್ರಿಯ ತ್ಯಾಜ್ಯವನ್ನು ಮನಬಂದಂತೆ ಎಸೆಯುತ್ತಾರೆ. ಸೀತಾ ನದಿಗೆ ಬಹುತೇಕರು ತ್ಯಾಜ್ಯ ಹಾಕಿ ಮಲಿನ ಮಾಡುತ್ತಿದ್ದಾರೆ. ಇದಕ್ಕೆಲ್ಲದಕ್ಕೆ ಬ್ರೇಕ್ ಹಾಕಲು ಸ್ಥಳೀಯ ಆಡಳಿತಗಳು ಕ್ರಮವಹಿಸಬೇಕು.

ಪಾಂಡುರಂಗ ಪೂಜಾರಿ ಅವರ ಕೆಲಸಕ್ಕೆ ಅಭಿನಂದನೆಗಳು. ಅವರು ಮಾಹಿತಿ ನೀಡಿದ್ದರಿಂದ, ಸಂಬಂಧಪಟ್ಟವರಿಗೆ ದಂಡನೆ ಬಿದ್ದಿದೆ. ಅವರಿಗೆ ಎಚ್ಚರಿಕೆ ನೀಡಿದ್ದೇವೇ. ಮುಂದಿನ ದಿನಗಳಲ್ಲಿ ಸಮಾಜದ ಸ್ವಾಸ್ಥವನ್ನು ಹಾಳು ಮಾಡಲು ಪ್ರಯತ್ನಿಸಿದರೆ ದುಪ್ಪಟ್ಟು ದಂಡವನ್ನು ವಿಧಿಸುಸುತ್ತೇವೆ. ಇದು ಎಲ್ಲರಿಗೂ ಎಚ್ಚರಿಕೆಯ ಕರೆಗಂಟೆಯಾಗಲಿ. ದಯಮಾಡಿ ನಮ್ಮೊಂದಿಗೆ ಸಹಕಾರ ನೀಡಿ ಸ್ವಚ್ಛ ಚಾರದ ನಿರ್ಮಾಣ ಮಾಡೋಣ.

ಚಾರ ಗ್ರಾಮ ಪಂಚಾಯತಿಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ:

ಹೆಚ್. ದಿನೇಶ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ಚಾರ ಗ್ರಾಪಂ. ಚಾರ ಗ್ರಾಮ ಪಂಚಾಯಿತಿಯವರು ತಪ್ಪಿತಸ್ಥರಿಗೆ ದೊಡ್ಡ ಮೊತ್ತದ ದಂಡ ವಿಧಿಸಿ ಎಲ್ಲರಿಗೆ ಎಚ್ಚರಿಕೆ ನೀಡಿದಂತಾಗಿದೆ. ಪಂಚಾಯಿತಿಗೆ ನಾನು ಮಾಹಿತಿ ನೀಡಿದ ತಕ್ಷಣ ಸೂಕ್ತ ಕ್ರಮ ಜರುಗಿಸಿದ್ದಾರೆ. ದಯಮಾಡಿ ಯಾರು ಕೂಡ ಮನೆಬಂದಂತೆ ಸಿಕ್ಕಸಿಕ್ಕಲ್ಲಿ ತ್ಯಾಜ್ಯವನ್ನು ಎಸೆಯಬಾರದು.

LEAVE A REPLY

Please enter your comment!
Please enter your name here