ಮುಲ್ಕಿ:ವಿದ್ಯಾರ್ಥಿನಿಯರಿಗೆ ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ಮಹತ್ವದ ನೆರವು ಒದಗಿಸುವ ಅಂಗವಾಗಿ ಲೈನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ವತಿಯಿಂದ ಸ್ಯಾನಿಟರಿ ಪ್ಯಾಡ್ ಬರ್ನರ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಲಯನ್ ಸೌಮ್ಯ ಅನಿಲ್ ಯಂತ್ರವನ್ನು ಉದ್ಘಾಟಿಸಿ ವಿದ್ಯಾರ್ಥಿನಿಯರಿಗೆ ಸ್ವಚ್ಛತೆ ಆರೋಗ್ಯದ ದೃಷ್ಟಿಯಿಂದ ನಮ್ಮ ಸಂಸ್ಥೆ ಈ ಯಂತ್ರದ ಕೊಡುಗೆಯನ್ನು ನೀಡಿದೆ ಎಂದರು ಲಯನ್ಸ್ ಕ್ಲಬ್ ಇನ್ಸ್ಪೈರ್ ಬಪ್ಪನಾಡಿನ ಸ್ಥಾಪಕ ಅಧ್ಯಕ್ಷರಾದ ಲ. ವೆಂಕಟೇಶ್ ಹೆಬ್ಬಾರ್, ಪ್ರತಿಭಾ ಹೆಬ್ಬಾರ್, ಅಧ್ಯಕ್ಷರಾದ ಲಯನ್. ಅನಿಲ್ ಕುಮಾರ್, ಪ್ರಥಮ ಉಪಾಧ್ಯಕ್ಷರಾದ ಪುಷ್ಪ ರಾಜ ಚೌಟ, ಪ್ರಾಂಶುಪಾಲರಾದ ಪ್ರೊ. ವೆಂಕಟೇಶ ಭಟ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅರುಣ್ ಕುಮಾರ್, ಲೈನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಇದರ ಸದಸ್ಯರಾದ ಸೌಮ್ಯ ಅನಿಲ್ ಕುಮಾರ್,ಸುಧೀರ್ ಏನ್ ಬಾಳಿಗ ,ಪ್ರಣವ ಶರ್ಮ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಜನಾಧಿಕಾರಿ ಆದ ಶರ್ಮಿಳಾ ರಾಜೇಶ್, ಕಾರ್ಯದರ್ಶಿ ರಿತೇಶ್, ಲಾವಣ್ಯ , ಉಪಸ್ಥಿತರಿದ್ದರು.
Home Uncategorized ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಾಯರ್ ವತಿಯಿಂದ ಕಾಲೇಜಿಗೆ ಸ್ಯಾನಿಟರಿ ಪ್ಯಾಡ್ ಬರ್ನರ್ ಯಂತ್ರ ಕೊಡುಗೆ

