ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಚಿತ್ರಾಪುರ ಮಠದಲ್ಲಿ ಚಿತ್ರಾಪುರ ಶ್ರೀ ಮಠದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ನಡೆಯುವ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ತಾ. 01-11-2025ನೇ ಶನಿವಾರ ಸಂಜೆ 4 ಗಂಟೆಯಿಂದ ಹಾಗೂ ತಾ. 02.11.2025ನೇ ಭಾನುವಾರ ಬೆಳಿಗ್ಗೆ 8.30ರಿಂದ ದಿನಪೂರ್ತಿ ಭಗವದ್ಭಕ್ತರ ಕೂಡುವಿಕೆಯಿಂದ ಕರಸೇವೆ ನಡೆಯಲಿದೆ.
ದಿನಾಂಕ 04-11-2025ನೇ ಮಂಗಳವಾರ ಸಾಯಂಕಾಲ ಮಹಾ ರಂಗಪೂಜೆ ಸಹಿತ ಕೆರೆಕಟ್ಟೆಯಲ್ಲಿ ಶ್ರೀ ದೇವಿಗೆ ದೀಪೋತ್ಸವ ಸಂಜೆ 6.45ಕ್ಕೆ ಮಹಾ ರಂಗಪೂಜೆ ಸಂಜೆ 7.15ಕ್ಕೆ ಬಲಿ ಹೊರಡುವುದು. 7.45ರಿಂದ ಕೆರೆಕಟ್ಟೆಯಲ್ಲಿ ಅಷ್ಟಾವಧಾನ ಸೇವೆಗಳು (ವೇದಶಾಸ್ತ್ರ, ಪುರಾಣ, ನೃತ್ಯ, ಸಂಗೀತ, ವೇಣುನಾದ, ಅಷ್ಟಕ, ಮಂಗಳವಾದ್ಯ) ನಡೆಯಲಿರುವುದು.
ಚಿತ್ರಾಪುರ ಶ್ರೀ ಮಠದ ಸಮಗ್ರ ಜೀರ್ಣೋದ್ದಾರ ಪೂರ್ವಭಾವಿಯಗಿ ತಾ. 07-11-2025ನೇ ಶುಕ್ರವಾರ ಬೆಳಿಗ್ಗೆ 10.45 ಗಂಟೆಗೆ ನಡೆಯುವ ಧನುರ್ಲಗ್ನದಲ್ಲಿ ‘ಶಿಲಾನ್ಯಾಸ’ ಕಾರ್ಯಕ್ರಮ ಜರುಗಲಿದೆ. ಭಕ್ತಾಭಿಮಾನಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಶ್ರೀ ಶ್ರೀ ವಿದ್ಯೆಂದ್ರತೀರ್ಥ ಶ್ರೀಪಾದರು ಏಕಮಾತ್ರ ಅನುವಂಶಿಕ ಆಡಳಿತ ಮೊಕ್ತೇಸರರು ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಮಠ ಇವರು ತಿಳಿಸದ್ದಾರೆ.

