ಆಳ್ವಾಸ್‌ನಲ್ಲಿ ಕರಾವಳಿ ಕರ್ನಾಟಕದ ಮೊದಲ ಕೃಷಿ ವಿಜ್ಞಾನ ಹಾಗೂ ಆಹಾರ ತಂತ್ರಜ್ಞಾನ ಪದವಿ ಕೋರ್ಸ್ ಆರಂಭ

0
58


ಮೂಡುಬಿದರೆ ತಾಲೂಕಿನ ಮಿಜಾರು ಗ್ರಾಮದ ಶೋಭಾವನ ಆವರಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನೂತನವಾಗಿ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾಲೇಜು ಈ ವರ್ಷದಿಂದಲೇ ಆರಂಭವಾಗಲಿದೆ. ನಾಲ್ಕು ವರ್ಷದ ಅವಧಿಯ ಬಿಎಸ್ಸಿ ಅಗ್ರಿಕಲ್ಚರ್ ಮತ್ತು ಬಿ ಟೆಕ್ ಫುಡ್ ಟೆಕ್ನಾಲಜಿ ಕೋರ್ಸ್ ಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಕಾಲೇಜು ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ.
ಇದು ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಕೃಷಿ ವಿಜ್ಞಾನ ಹಾಗೂ ಆಹಾರ ತಂತ್ರಜ್ಞಾನ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿ ಮೂಡಿಬರುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಪ್ರಯೋಗಶಾಲೆ, ತೋಟಗಾರಿಕೆ, ಮತ್ತು ಕೃಷಿ ಕ್ಷೇತ್ರದ ನೈಜ ಅನುಭವ, ಆಹಾರ ಸಂಸ್ಕರಣೆ, ಮತ್ತು ಗುಣಮಟ್ಟ ನಿಯಂತ್ರಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿರುವ ತಾಂತ್ರಿಕ ಜ್ಞಾನ, ನಿಪುಣ ಬೋಧಕರಿಂದ, ಹಾಗೂ ಕೈಗಾರಿಕಾ ತರಬೇತಿಯ ಸೌಲಭ್ಯಗಳನ್ನು ಒದಗಿಸುತ್ತಿದೆ.
ಮಂಗಳೂರು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಆಳ್ವಾಸ್ ಸಂಸ್ಥೆ ಈಗಾಗಲೇ ಒದಗಿಸುತ್ತಿದೆ. ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಕೃಷಿ ಮತ್ತು ಆಹಾರ ತಂತ್ರಜ್ಞಾನ ವಿಭಾಗಗಳ ಸೇರ್ಪಡೆಯು ಸಂಸ್ಥೆಯ ಶೈಕ್ಷಣಿಕ ಬೆಳವಣಿಗೆಯಲ್ಲಿ ಇನ್ನೊಂದು ಮಹತ್ತರ ಮೈಲುಗಲ್ಲಾಗಲಿದೆ. ಪ್ರಸ್ತುತ ಕೋರ್ಸನ್ನು ಪ್ರಾರಂಭಿಸಲು ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನವನ್ನು ನೀಡುತ್ತಿರುವ ಕರ್ನಾಟಕ ರಾಜ್ಯ ಸಚಿವ ಚೆಲುವರಾಯಸ್ವಾಮಿ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ್ ಕೃಷಿ ಮತ್ತು ಹಾರ್ಟಿಕಲ್ಚರ್ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾಕ್ಟರ್ ಆರ್ ಸಿ ಜಗದೀಶ್, ಕುಲಸಚಿವ ಡಾಕ್ಟರ್ ಕೆ ಸಿ ಶಶಿಧರ್ ಅವರನ್ನು ಡಾ. ಮೋಹನ್ ಆಳ್ವ ಬಹಳವಾಗಿ ಸ್ಮರಿಸಿಕೊಂಡು ಅವರ ಸಹಕಾರಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.
ಆಸಕ್ತ ವಿದ್ಯಾರ್ಥಿಗಳು ಈ ವರ್ಷದ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಫಾರ್ಮ್ ಸೈನ್ಸ್ ಕಾಲೇಜು ಕೋಡ್ 038 ಆಗಿದ್ದು ಹೆಚ್ಚಿನ ವಿವರಗಳಿಗೆ 9448458334/ 8050585606 ನನ್ನು ಸಂಪರ್ಕಿಸಬಹುದಾಗಿದೆ.
.

ವರದಿ ರಾಯಿ ರಾಜ ಕುಮಾರ

LEAVE A REPLY

Please enter your comment!
Please enter your name here