ಮುಲ್ಕಿ: ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಹೆಲೆಯಂಗಡಿಯ ಉದ್ಯಮಿ ಕೊಡುಗೈದಾನಿ ಜಯ ಕೃಷ್ಣ ಕೋಟ್ಯಾನ್ ಆಯ್ಕೆಯಾಗಿದ್ದಾರೆ
ಹಳೆಯಂಗಡಿಯಲ್ಲಿ ಪೂಜಾ ಅವೆಂಜರ್ಸ್ ಮತ್ತು ಕೆಟರಿಂಗ್ ಸಂಸ್ಥೆಯ ಮೂಲಕ ಹೆಸರುವಾಸಿಯಾಗಿರುವ ಜಯ ಕೃಷ್ಣ ಕೋಟ್ಯಾನ್ ರವರು ಪೂಜಾ ಫ್ರೆಂಡ್ಸ್ ಎಂಬ ತಂಡದ ಸ್ಥಾಪಕರಾಗಿ ಸಮಾಜ ಸೇವೆ ಮೂಲಕ ಪ್ರಸಿದ್ಧಿಯಾಗಿದ್ದಾರೆ.
ಹಳೆಯಂಗಡಿಯಲ್ಲಿ ಮೂರು ಉಚಿತ ಆಂಬುಲೆನ್ಸ್ ಗಳ ಮೂಲಕ ರೋಗಿಗಳ ಅಸಹಾಯಕರ ಉಚಿತ ಸೇವೆ ನಡೆಸುತ್ತಿದ್ದಾರೆ.
ಇದಲ್ಲದೆ ಮುಲ್ಕಿ ಸೀಮೆ ಅರಸು ಕಂಬಳ ಸಮಿತಿ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ , ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವಕರಿಗೆ ಪ್ರೋತ್ಸಾಹ ನೀಡುತ್ತಾ ಸಮಾಜ ಸೇವೆ ಮೂಲಕ ಪ್ರಸಿದ್ಧಿಯಾಗಿದ್ದು ಅರ್ಹವಾಗಿಯೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಯ ಕೃಷ್ಣ ಕೋಟ್ಯಾನ್ ರವರನ್ನು ಬೆಂಗಳೂರಿನ ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬರ್ನಾಡ್ , ನಿರ್ದೇಶಕ ಗೌತಮ್ ಜೈನ್ ಮುಲ್ಕಿ ಅರಮನೆ, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು, ನಿರ್ದೇಶಕರಾದ ಧರ್ಮಾನಂದ ಶೆಟ್ಟಿಗಾರ್, ಶರತ್ ಕಾರ್ನಾಡ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ವಾಸು ಪೂಜಾರಿ ಚಿತ್ರಾಪು,ಕಿಶೋರ್ ಸಾಲ್ಯಾನ್ ಬಿರುವೆರ್ ಕುಡ್ಲ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

