ನೃತ್ಯ ಕ್ಷೇತ್ರದಲ್ಲಿ ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅರ್ಚನಾ ಸಂಪ್ಯಾಡಿ

0
115

ನೃತ್ಯ ಕ್ಷೇತ್ರದಲ್ಲಿ ದ.ಕ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅರ್ಚನಾ ಸಂಪ್ಯಾಡಿ ಆಯ್ಕೆ ಯಾಗಿದ್ದಾರೆ.

ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರ : ತನ್ನ ಎರಡೂವರೆ ವಯಸ್ಸಿನಲ್ಲೇ ಶ್ರೀಕೃಷ್ಣ ವೇಷಧಾರಿಯಾಗಿ ಹಲವು ಸಂಘ ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನವನ್ನು ಪಡೆದುಕೊಂಡು ಕಲಾಜೀವನಕ್ಕೆ ಕಾಲಿರಿಸಿ ಮುಂದಕ್ಕೆ ಭರತನಾಟ್ಯ ತರಬೇತಿಯನ್ನು ಪಡೆದು ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 8ನೇ ವಯಸ್ಸಿನಿಂದಲೇ ಭರತನಾಟ್ಯದಲ್ಲಿ ವಿಶೇಷ ಶೈಲಿಯ ನೃತ್ಯವಾದ ತಲೆಯಲ್ಲಿ ದೀಪ, ಮೊಳೆಸ್ಟಾಂಡ್, ಮಡಕೆ, ಗಾಜಿನ ಲೋಟದ ಮೇಲೆ ನಿಂತು ನೃತ್ಯವನ್ನು ಮಾಡುತ್ತಾ ತನ್ನ ಅಮೋಘ ಪ್ರತಿಭೆಯನ್ನು ಪ್ರಸ್ತುತ ಪಡಿಸಿ ಜನರ ಮೆಚ್ಚುಗೆ ಪಡೆದಿರುತ್ತಾರೆ.

ಯೋಗಾಸನದಲ್ಲಿ ‘ಇಂಟ‌ರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್’ ಮಾಡಿರುತ್ತಾರೆ. ವಿಶೇಷವಾಗಿ ಯೋಗಾಸನದೊಂದಿಗೆ ದೀಪದ ನೃತ್ಯ (Artistic Yoga) ಮಾಡುತ್ತಾರೆ. ಸಂಗೀತ, ಯೋಗ, ನೃತ್ಯಗಳ ಬಗ್ಗೆ ಒಲವುಳ್ಳ ಇವರು ಅಪೂರ್ವ ಸಾಧಕಿಯಾಗಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಾರಿತೋಷಕಗಳನ್ನು ಪಡೆದಿರುತ್ತಾರೆ. ಇವರು ಸುಮಾರು 700ಕ್ಕೂ ಹೆಚ್ಚು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ, ಯೋಗನೃತ್ಯ, ವೆಸ್ಟರ್ನ್‌ನೃತ್ಯ, ಅರೆಶಾಸ್ತ್ರೀಯ, ಜಾನಪದ, ಯಕ್ಷನಾಟ್ಯ, ಕಥಕ್‌ ಶೈಲಿಯ ನೃತ್ಯ ಪ್ರದರ್ಶನ ನೀಡುತ್ತಾ ಬಂದಿದ್ದು ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನವನ್ನು ಪಡೆದ ಗ್ರಾಮೀಣ ಪ್ರದೇಶದ ಬಾಲಪ್ರತಿಭೆ.

LEAVE A REPLY

Please enter your comment!
Please enter your name here