ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ವಾಯ್ಸ್ ಆಫ್ ಆರಾಧನಾ ಸಂಸ್ಥೆಯ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಕಿನ್ನಿಗೋಳಿ ಯುಗಪುರುಷದ ಸಂಪಾದಕರಾದ ಭುವನಾಭಿರಾಮ ಉಡುಪ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪುನರೂರು ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷರಾದ ದೇವಪ್ರಸಾದ್ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪೊಂಪೈ ಕಾಲೇಜಿನ ಪ್ರಾಂಶುಪಾಲರಾದ ಪುರುಷೋತ್ತಮ ಕೆ.ವಿ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ನಮ್ಮ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು. ದುರ್ಗಾ ಸಂಜೀವಿ ಮಣಿಪಾಲ ಆಸ್ಪತ್ರೆ ಕಟೀಲು ಇದರ ತಜ್ಞ ವೈದ್ಯರಾದ ಡಾ| ಶಿವಾನಂದ ಪ್ರಭು ಇವರಿಗೆ ರಾಜ್ಯೋತ್ಸವ ಗೌರವಾರ್ಪಣೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಅಗರಿ ಎಂಟರ್ಪ್ರೈಸಸ್ ಸುರತ್ಕಲ್ ಇದರ ಮಾಲಕರಾದ ಅಗರಿ ರಾಘವೇಂದ್ರ ರಾಜ್, ಯುಗಪುರುಷದ ಸಂಪಾದಕರಾದ ಭುವನಾಭಿರಾಮ ಉಡುಪ, ಕರ್ನಾಟಕ ಜಾನಪದ ಪರಿಷತ್ ಮೂಡಬಿದ್ರೆ ತಾಲೂಕು ಘಟಕ ಇದರ ಅಥ್ಯಕ್ಷೆ ಶ್ರೀಮತಿ ಪದ್ಮಶ್ರೀ ಭಟ್, ಉದ್ಯಮಿ ಸಾಣೂರು ಅರುಣ್ ಶೆಟ್ಟಿಗಾರ್, ಮುಲ್ಕಿ ಹೋಬಳಿಯ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜೋಸ್ಸಿ ಪಿಂಟೋ, ಪ್ರದೀಪ್ , ಸತೀಶ್ ಬಂಗೇರಾ,ಯುಗಪುರುಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಟೀಲು ದುರ್ಗಾ ಸಂಜೀವಿ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಶಿವಾನಂದ ಪ್ರಭು ಇವರಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಗೌರವಾರ್ಪಣೆ ನಡೆಯಿತು.
ಭುವನಾಭಿರಾಮ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ನರೆಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

