ಉಪ್ಪಳ: ಮಂಗಳೂರು ಮೂಲದ ವ್ಯಕ್ತಿಯೊರ್ವನನ್ನು ಬರ್ಬರ ಹತ್ಯೆಗೈದ ಘಟನೆ ಉಪ್ಪಳದಲ್ಲಿ ನಡೆದಿದೆ. ಹತ್ಯೆಗೀಡಾದ ವ್ಯಕ್ತಿ ರೌಡಿಶೀಟರ್ ತುಕ್ಕ ನೌಫಲ್ ಎಂದು ತಿಳಿದು ಬಂದಿದೆ.

ನೌಫಲ್ ಮಂಗಳೂರಿನ ಫೈಝಲ್ ನಗರ ನಿವಾಸಿಯಾಗಿದ್ದು, ಉಪ್ಪಳ ರೈಲ್ವೆ ಗೇಟ್ ಬಳಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಈತನ ಮೃತದೇಹ ಕಾಸರಗೋಡಿನ ಆಸ್ಪತ್ರೆಯಲ್ಲಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

