ಕುಂದಾಪುರ ತಾಲೂಕು ಕ್ರೀಡಾಕೂಟ ಸರಕಾರಿ ಪ್ರೌಢಶಾಲೆ ಹೊಸಂಗಡಿ ವಿದ್ಯಾರ್ಥಿ ಚಿನ್ನದ ಪದಕದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0
32

ಶಾಲಾ ಶಿಕ್ಷಣ ಇಲಾಖೆ ಮತ್ತು ಸರಕಾರಿ ಪ್ರೌಢಶಾಲೆ ವಕ್ವಾಡಿ ಇವರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ 17 ರ ವಯೋಮಾನದ ಬಾಲಕರ ನಡಿಗೆ ಸ್ಪರ್ಧೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಹೊಸಂಗಡಿ ಪ್ರೌಢಶಾಲಾ ವಿಭಾಗದ 10 ನೇ ತರಗತಿ ವಿದ್ಯಾರ್ಥಿ ತೇಜಸ್ ಯು. ಹುಲಿಕಲ್ “ಪ್ರಥಮ” ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರು ತ್ತಾನೆ.
ಹಾಗೆಯೇ ಬಾಲಕಿಯರ 400 ಮೀಟರ್ ರಿಲೇ ತಂಡ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದೆ. ಚೈತನ್ಯ, ಅನುಷಾ ಜುಲ್ಫಾ ಮತ್ತು ತನ್ಜೀಲ ರ ತಂಡ ಈ ಸಾಧನೆ ಮಾಡಿದ್ದಾರೆ.
ಇವರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ವೀರರಾಜೇಂದ್ರ ಹೆಗ್ಡೆ ಅವರ ನೇತೃತ್ವದಲ್ಲಿ ತರಬೇತಿ ಪಡೆದಿದ್ದು, ಇವರನ್ನು ಮುಖ್ಯೋಪಾಧ್ಯಾಯರಾದ ಶೀ ಗುರುಪ್ರಸಾದ್ H ಇವರು ಪ್ರೋತ್ಸಾಹಿಸುತ್ತಾರೆ.
ತಂಡವನ್ನು ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕ ವೃಂದ, SDMC ಅಧ್ಯಕ್ಷರು ಸರ್ವಸದಸ್ಯರು, ಪೋಷಕರು, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಸರ್ವಸದಸ್ಯರು ಮತ್ತು ಶಾಲಾ ವಿದ್ಯಾರ್ಥಿ ನಾಯಕ ಅಕ್ಷಯ್ ಹಾಗೂ ವಿದ್ಯಾರ್ಥಿ ವೃಂದ ಅಭಿನಂದಿಸಿ, ಜಿಲ್ಲಾ ಮಟ್ಟಕ್ಕೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here