ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ (ರಿ.) ಅಲ್ಬಾಡಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ 171ನೇ ಜನ್ಮ ದಿನಾಚರಣೆಯ ಅಂಗವಾಗಿ ಗುರುಪೂಜೆ, ಸಭಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮವು ದಿನಾಂಕ 02-11-2025 ರಂದು ಶ್ರೀ ವಾಸುಕಿ ಸಭಾಭವನ ಬೆಳ್ವೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಗುರುತತ್ವ ಸಂದೇಶ ಸಾರಿದ ನಾರಾಯಣ ಗುರು ಅಭಿವೃದ್ಧಿ ನಿಗಮ ಮಂಡಳಿ ರಾಜ್ಯಾಧ್ಯಕ್ಷರಾದ ಮಂಜುನಾಥ ಪೂಜಾರಿ ಮುದ್ರಾಡಿ ಮಾತನಾಡಿ ಬಿಲ್ಲವ ಸಮಾಜ ಒಂದು ಕಾಲದಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿತ್ತು ಅಸ್ಪೃಶ್ಯತೆಯಿಂದ ಕೂಡಿತ್ತು ಇಂತಹ ಸಮಯದಲ್ಲಿ ಬಿಲ್ಲವ ಸಮಾಜದಲ್ಲಿ ಜನಿಸಿದ ನಾರಾಯಣ ಗುರುಗಳು ಬಿಲ್ಲವ ಸಮಾಜದ ಹಾಗೂ ಹಿಂದುಳಿದ ವರ್ಗಗಳ ಉದ್ದಾರಕ್ಕಾಗಿ ಶ್ರಮಿಸಿದರು, ಹಲವಾರು ಕಡೆಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸಿ ಸರ್ವರೂ ದೇವಸ್ಥಾನ ಪ್ರವೇಶ ಮಾಡುವಂತೆ ಮಾಡಿದರು, ನಮ್ಮ ಮಕ್ಕಳಿಗೆ ವಿದ್ಯೆ ಮತ್ತು ಕುಟುಂಬ ಸಾಮರಸ್ಯ ಕಳಿಸುವುದು ತುಂಬಾ ಮುಖ್ಯವಾಗಿದೆ, ನಮ್ಮ ಸಮಾಜದ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ವಿದ್ಯಾವಂತರಾದರೆ ಬಿಲ್ಲವ ಸಮಾಜವು ಬಲಾಡ್ಯವಾಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಕುಮಾರ್ ಬೀಜಾಡಿ ಮಾತನಾಡಿ ಅಸ್ಪೃಶ್ಯತೆ ಮೂಢನಂಬಿಕೆ ತುಂಬಿದ್ದ ಅಂದಿನ ಕಾಲದಲ್ಲಿ ನಾರಾಯಣ ಗುರುಗಳು ಸಮಾಜದಲ್ಲಿ ಹಲವಾರು ಬದಲಾವಣೆಗಳನ್ನು ತಂದರು, ಕೇರಳ ರಾಜ್ಯ ಇಂದು ನೂರಕ್ಕೆ ನೂರು ವಿದ್ಯೆ ಪಡೆದಿದೆ ಎಂದರೆ ಅದಕ್ಕೆ ನಾರಾಯಣ ಗುರುಗಳು ಕಾರಣ, ಬಿಲ್ಲವ ಸಮಾಜದಲ್ಲಿ ಒಗ್ಗಟ್ಟು ಇದ್ದಾಗ ಮಾತ್ರ ಸರಕಾರದ ವಿವಿಧ ಸವಲತ್ತು ಪಡೆದುಕೊಳ್ಳಲು ಸಾಧ್ಯ, ಬಹುಕಾಲದ ಎಲ್ಲರ ಹೋರಾಟದ ಫಲವಾಗಿ ಇಂದು ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ರಾಜೀವ ಪೂಜಾರಿ ಮಾತನಾಡಿ ಒಂದು ಸಂಘಟನೆ ಯಶಸ್ವಿಯಾಗಲು ಆ ಸಂಘದ ಸದಸ್ಯರ ಒಗ್ಗಟ್ಟು ಕಾರಣವಾಗುತ್ತದೆ, ನಮ್ಮ ಸಮಾಜದ ಬಗ್ಗೆ ಕೀಳರಿಮೆ ಬೇಡ, ನಾವು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಬಾಲಾಡ್ಯರಾದಾಗ ಸಮಾಜದ ಬೆಳವಣಿಗೆ ಸಾಧ್ಯವಾಗುತ್ತದೆ, ಸಂಫದ ಬೆಳವಣಿಗೆಗೆ ಸರ್ವರೂ ಸಹಕರಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಬೆಳ್ವೆಯ ಉದ್ಯಮಿಗಳಾದ ಉದಯ ಕುಮಾರ್ ಪೂಜಾರಿ, ಸಂಘದ ಗೌರವಾಧ್ಯಕ್ಷರಾದ ಪ್ರೇಮ್ ಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಪೂಜಾರಿ ಶಾಂದ್ರಬೆಟ್ಟು, ಸಂಘದ ಉಪಾಧ್ಯಕ್ಷರಾದ ಭಾಸ್ಕರ ಪೂಜಾರಿ ಮೆಣಸಾಡಿ, ಸಂಘದ ಉಪಾಧ್ಯಕ್ಷರಾದ ಬಾಬು ಪೂಜಾರಿ ಕೆರ್ಜಾಡಿ, ಸಂಘದ ಕೋಶಾಧಿಕಾರಿ ಸುಧಾಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಶ್ರೀಮತಿ ಸರಸ್ವತಿ ಹಾಗೂ ವೈಬ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ ಆರ್ಯ ಸುರ್ಗಿಜೆಡ್ದು ಇವರನ್ನು ಸನ್ಮಾನಿಸಲಾಯಿತು
ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು, ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು
ಸುರೇಶ್ ಪೂಜಾರಿ ಬೆಳ್ವೆ ಹಾಗೂ ಪ್ರವೀಣ್ ಪೂಜಾರಿ ಶೇಡಿಮನೆ ಕಾರ್ಯಕ್ರಮವನ್ನು ನಿರೂಪಿಸಿದರು.

