ಮುಲ್ಕಿ ಕೆಎಸ್ ರಾವ್ ನಗರ ಸರಕಾರಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಸಹಯೋಗದೊಂದಿಗೆ ಜರಗಿದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯ ಸಂದರ್ಭ ಮಾತೆ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ಕನ್ನಡ ದ್ವಜವನ್ನು ಪ್ರತಿಷ್ಠಾಪಿಸಿ ಮಾತನಾಡಿದ ಲlಡಾl ಧರ್ಮದರ್ಶಿ ಹರಿಕೃಷ್ಣ ಪುನರೂರು ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಕನ್ನಡದ ಬಳಕೆಯನ್ನು ತಿರಸ್ಕರಿಸುವ ಅನ್ಯ ಭಾಷಿಕರಿಗೆ ಧಿಕ್ಕಾರವಿರಲಿ ಕನ್ನಡ ನಾಡು ನುಡಿಯ ಬೆಳವಣಿಗೆಗೆ ನಾವು ಕನ್ನಡಿಗರು ಅವಿರತ ದುಡಿಯಬೇಕು ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ನಿರಂತರ ವಾದಲ್ಲಿ ಮಾತ್ರ ಕನ್ನಡದ ರಕ್ಷಣೆ ಆಗುತ್ತದೆ ಎಂದರು ಈ ಸಂದರ್ಭ ಹಾಸನ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಯ ಜಿಲ್ಲಾ ಕಾರ್ಯದರ್ಶಿಯಾದ ಲlರಘು ಪಾಳ್ಯ, ಲl ಎನ್. ಟಿ. ರಾಜ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ನ ಅಧ್ಯಕ್ಷ ಅನಿಲ್ ಕುಮಾರ್ ಕಾರ್ಯದರ್ಶಿ ಅಶ್ವಿನಿ ಶರ್ಮ ಕೋಶಾಧಿಕಾರಿ ಸಂತೋಷ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಬಿ ಶಿವಪ್ರಸಾದ್, ಸ್ಥಾಪಕ ಅಧ್ಯಕ್ಷ ಲಯನ್ ವೆಂಕಟೇಶ ಹೆಬ್ಬಾರ್, ಪ್ರತಿಭಾ ಹೆಬ್ಬಾರ್ ಸೌಮ್ಯಲತಾ ಅನಿಲ್, ಪ್ರಣವ್ ಶರ್ಮ, ಕಲ್ಲಪ್ಪ ತಡವಲಗ, ಮುಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಡುತ್ತೂರು ಮಿಥುನ್ ಉಡುಪ ,ಕಾರ್ಯದರ್ಶಿ ಎರಿಕ್ ಪಾಯಸ್, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಕಾಮೇಶ್ವರಿ ಭಟ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ದಿನೇಶ್ ಕೆ ,ಸುಜಾತಾ ಭಟ್, ಶ್ರೀದೇವಿ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರುಗಳಾದ ಸಿದ್ದಪ್ಪ ,ಜ್ಯೋತಿ ಎಸ್ ಮೊದಲಾದವರು ಉಪಸ್ಥಿತರಿದ್ದರು

