ಅರ್ಥಧಾರಿ ವಿಟ್ಲ ಶಂಭು ಶರ್ಮ ಸ್ವರ್ಗಸ್ಥ: ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತ ಚಾರ್ಯ ಪಟ್ಟಾಚಾರ್ಯ ಸಂತಾಪ

0
28


ಯಕ್ಷರಂಗದ ಪ್ರಸಿದ್ಧ ಹಿರಿಯ ಅರ್ಥಧಾರಿ , ವೇಷಧಾರಿ ವಿಟ್ಲ ಶಂಭು ಶರ್ಮ ರ ನಿಧನದ ವಾರ್ತೆಯು , ಯಕ್ಷಗಾನದ ಅಭಿಮಾನಿ ಗಳಿಗೆ ದುಃಖ್ಖ ಉಂಟು ಮಾಡಿದೆ . ಇಂದು ( 01.11.2025 ) ಮುಂಜಾನೆ 4.00 ಗಂಟೆ ಸುಮಾರಿಗೆ ಶಂಭುಶರ್ಮರು ನಿಧನರಾದರು . ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ನಿಧನ ಹೊಂದಿದರು . ಅವರಿಗೆ 74 ವರ್ಷಗಳ ವಯಸ್ಸಾಗಿತ್ತು .
*ವಿಟ್ಲ ಶಂಭು ಶರ್ಮ ಇದೀಗ ನೇಪಥ್ಯಕ್ಕೆ ಸರಿದರೂ , ಅವರ ಅರ್ಥಗಾರಿಕೆಯ ಪ್ರತಿಭೆ ಎಂದಿಗೂ ಅಜರಾಮರವಾಗಿದೆ .
ವಿಟ್ಲ ಶಂಭು ಶರ್ಮರು ಕುಂಬ್ಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ ಕೃಷ್ಣಭಟ್ – ಹೇಮಾವತಿ ದಂಪತಿಗಳ ಸುಪುತ್ರರಾಗಿ 13.10.1951 ರಂದು ಜನಿಸಿದರು .
ನೂರಾರು ಪ್ರಶಸ್ತಿ , ಸನ್ಮಾನಗಳು ಸಂದಿವೆ . ಶರ್ಮರು ತಮ್ಮ ಧರ್ಮಪತ್ನಿ ಶ್ರೀಮತಿ ‌ ಲಕ್ಷ್ಮೀ ಶರ್ಮ, ಮಗ ಕೃಷ್ಣರಾಜ , ಸೊಸೆ ವಿದ್ಯಾ ಹಾಗೂ ಮೊಮ್ಮಗ ನಿಶ್ಚಯರೊಂದಿಗೆ ಬಂಟ್ವಾಳ ತಾಲೂಕಿನ ಮೊಡಂಕಾಪಿನಲ್ಲಿ ಸಂತೃಪ್ತ ಜೀವನವನ್ನು ನಡೆಸುತ್ತಿದ್ದು ಇತ್ತೀಚೆಗೆ ಪುತ್ತೂರು ಸಮೀಪದ ಮುರ ಎಂಬಲ್ಲಿ ನೆಲೆಸಿದ್ದರು ಅಗಲುವಿಕೆ ಯಿಂದ ಆಗಿರುವ ದುಃಖ್ಖ ವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು – ಮೂಡುಬಿದಿರೆ ಶ್ರೀ ಮಠ ದ ಭಗವಾನ್ ಪಾರ್ಶ್ಶ್ವನಾಥ ಸ್ವಾಮಿ ಕುಷ್ಮಾ o ಡಿ ನೀ ದೇವಿ ಯಲ್ಲಿ ಪ್ರಾರ್ಥಿಸುತ್ತೇವೆ ಹಾಗೂ ಸಮಸ್ತ ಅಭಿಮಾನಿಗಳ ಪರವಾಗಿ ಶ್ರೀ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತ ಚಾರ್ಯ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿ ದಿಗಂಬರ ಜೈನ ಮಠ ಮೂಡುಬಿದಿರೆ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here