ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತದಲ್ಲಿ ಸಹ ಸವಾರೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಮೃತಪಟ್ಟ ಸಹ ಸವಾರೆ ತಸ್ಬೀಯಾ ಬೇಗಂ ಎಂದು ತಿಳಿದು ಬಂದಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ದಿನಾಂಕ 02.11.2025 ರಂದು ಮದ್ಯಾಹ್ನ 12:10 ಗಂಟೆಗೆ ಬೈಂದೂರು ತಾಲೂಕಿನ ಯಳಜಿತ ಗ್ರಾಮದ ರಾ ಹೆ 766 C ರ ಗೋಳಿಮರ ಕ್ರಾಸ್ ಬಳಿ ಫಿರ್ಯಾಧಿದಾರ ಚಂದ್ರಶೇಖರ ನಾಯ್ಕ (ಪ್ರಾಯ: 64 ವರ್ಷ) ತಂದೆ : ವೆಂಕಟ ನಾಯ್ಕ ವಾಸಪಾರ್ವತಿ ಕಂಪೌಂಡ್ ವಿದ್ಯಾಲಕ್ಷ್ಮೀ ಹೊಸ್ಟೇಟ ಹತ್ತಿರ 52 ನೇ ಹೇರೂರು ಗ್ರಾಮ ಇವರ ಮಾವನಾದ ಎ ರಘುರಾಮ ರವರ ಬಾಬ್ತು KA 20 MD 2030 ನಂಬ್ರನ ಕಿಯಾ ಸಲೂನ್ ಕಾರಿನಲ್ಲಿ ಫಿರ್ಯಾಧಿದಾರರು ಮತ್ತು ಅವರ ಹೆಂಡತ್ತಿಯಾದ ಮೀನಾ ಮತ್ತು ಮಾಮಿ ಶಾರದ ಹಾಗೂ ಅತ್ತಿಗೆ ರತ್ನ ರೊಂದಿಗೆ ಬ್ರಹ್ಮಾವರದಿಂದ ಗೋಳಿಹೊಳೆಯಲ್ಲಿರುವ ಅವರ ಸಂಭಂದಿಕರ ಮನೆಗೆ ಫಿರ್ಯಾಧಿದಾರರ ಮಾವ ಎ ರಘುರಾಮ ಚಲಾಯುಸುತ್ತಿದ್ದ ಕಾರಿನಲ್ಲಿ ತೆರಳುತ್ತಿರುವಾಗ ಫಿರ್ಯಾಧಿದಾರರ ಎದುರಿನಿಂದ ಅಂದರೆ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ KA 15 EF 5908 ನಂಬ್ರನ ಸುಜುಕಿ ಸ್ಕೂಟರ್ ಸವಾರ ಸುಭಾನ್ ತನ್ನ ಸ್ಕೂಟರ್ ಅನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ತೀರ ಬಲ ಬದಿಗೆ ಚಲಾಯಿಸಿ ಫಿರ್ಯಾಧಿದಾರರ ಕಾರಿಗೆ ಎದುರಿನಿಂದ ಗುದ್ದಿದ್ದ ಪರಿಣಾಮ ಸ್ಕೂಟರ್ ಸವಾರ ಮತ್ತು ಸಹಸವಾರ ಇಬ್ಬರು ರಸ್ತೆಗೆ ಬಿದ್ದಿದ್ದು ಫಿರ್ಯಾಧಿದಾರರು ಇಳಿದು ನೋಡಲಾಗಿ ಬೈಕ್ ಸವಾರ ಹೆಲ್ ಮೇಟ್ ಧರಿಸಿದ್ದು ಆತನ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದ್ದು ಹಾಗೂ ಸಹ ಸವಾರಳಿಗೆ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿರುತ್ತದೆ. ಫಿರ್ಯಾಧಿದಾರರು ಕೂಡಲೇ ಅವರನ್ನು ಉಪಚರಿಸಿ 108 ಅಂಬುಲೆನ್ಸ ನಲ್ಲಿ ಅವರಿಬ್ಬರನ್ನು ಕುಂದಾಪುರ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದ್ದು ನಂತರ ಗಾಯಗೊಂಡ ತಸ್ಬೀಯಾ ಬೇಗಂ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 194/2025 ಕಲಂ;281 125(a)106 ಬಿಎನ್ ಎಸ್ ಮತ್ತು 134(a&b) IMV act ರಂತೆ ಪ್ರಕರಣ ದಾಖಲಾಗಿರುತ್ತದೆ.

