ವಿಜಯನಗರ ಅಕ್ವಾಟಿಕ್ ಸೆಂಟರ್ ಕೊಪ್ರೊರೇಷನ್ ಸ್ವಿಮ್ಮಿಬಿಜಿ ಪೂಲ್ ಆರ್‌ಪಿಸಿ ಲೇಔಟ್ ಬೆಂಗಳೂರು ಇಲ್ಲಿ 2025 ನವೆಂಬರ್ 1 ಮತ್ತು 2ರಂದು ನಡೆದ ಕರ್ನಾಟಕ ಈಜು ಸಂಘ (ರಿ.) 25ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ 2025-26 ಈಜು ಸ್ಪರ್ಧೆಯಲ್ಲಿ ವಿಟ್ಲದ ಶ್ರೀಲಕ್ಷ್ಮಿ ವಿಟ್ಲ ಇವರು 4 ಚಿನ್ನದ ಪದಕವನ್ನು ಗೆದ್ದು, 21 ರಿಂದ 23 ನವೆಂಬರ್ 2025ರಂದು ಹೈದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ನಡೆಯುವ ಈಜು ಫೆಡರೇಶನ್ ಆಫ್ ಇಂಡಿಯಾ 21ನೇ ರಾಷ್ಟ್ರೀಯ ಮಾಸ್ಟರ್ಸ್ ಚಾಂಪಿಯನ್‌ಶಿಪ್- 2025 ಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಈಜು ಸಂಘ (ರಿ.) 25ನೇ ರಾಜ್ಯ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ 2025-26 ರಲ್ಲಿ 200 ಮೀಟರ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ
100 ಮೀಟರ್ ಬಟರ್‌ಫ್ಲೈ ನಲ್ಲಿ ಚಿನ್ನದ ಪದಕ
100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ನಲ್ಲಿ ಚಿನ್ನದ ಪದಕ
200*4 ಮೆಡ್ಲೆ ರಿಲೇ ಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ಶ್ರೀಲಕ್ಷ್ಮಿ ವಿಟ್ಲ ಇವರು ವಿ. ವನ್ ಅಕ್ವಾ ಸೆಂಟರ್ ಮಂಗಳೂರು ಇಲ್ಲಿ ಈಜು ತರಬೇತುದಾರಾಗಿದ್ದಾರೆ.

