ಮಹಾರಾಷ್ಟ್ರ: ಕನ್ನಡ ಸಾಮಾಜಿಕ ಸಂಸ್ಥೆ ಪೆಣ್(ರಿ) ಇವರು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ವಾಸ್ತ ಪ್ಯಾಲೇಸ್ ಪೆಣ್‌ನ ಸಭಾಗೃಹದಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷ ಶ್ರೀ ಸತೀಶ್ ಶೆಟ್ಟಿ ಮತ್ತು ನಾಗಪ್ಪ ತೆಗ್ಗಿನ್ ಇವರು ದ್ವಜಹಾರೋಹಣ ಮಾಡಿದರು. ಶ್ರೀ ಬಿಜೂರಾಜ್ ಸಾಲಿಯಾನ್ ವಂದಿಸಿ, ಶುಭ ಜಯ ಗೀತೆಯನ್ನು ಹಾಡಿ ಧ್ವಜ ಏರಿಸಿ ಹಾರಿಸಿ, ನಾಡ ಗುಡಿ ವಂದನೆ ಗೀತೆ ಹಾಡಿದರು.
ಸಂಸ್ಥೆಯ ಕಾರ್ಯದರ್ಶಿ ಬಿಜೂರಾಜ್ ಸಾಲಿಯಾನ್ ಕರ್ನಾಟಕ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು. ಫಕ್ಕಿರೇಶ್ ಹೊಂಬಳಾಡ್, ಬಿಜೂರಾಜ್ ಮತ್ತು ಫಕ್ಕಿರೇಶ್ ಮಾಗಳಾಡ್ ಇವರು ನಾಡ ಗೀತೆ ಹಾಡಿ ಎಲ್ಲರ ಮನ ಸೆಳೆದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊನೆಗೆ ಜನ ಗಣ ಮನ ರಾಷ್ಟ್ರ ಗೀತೆಯೊಂದಿಗೆ ಕೊನೆಗೊಂಡಿತು.
ಈ ಕಾರ್ಯಕ್ರಮಕ್ಕೆ ಸತೀಶ್ ಶೆಟ್ಟಿ, ನಾಗಪ್ಪ ತೆಗ್ಗಿನ್, ಎಚ್ ಎ . ಸಂತೋಷ್, ಬಿಜೂರಾಜ್ ಸಾಲಿಯಾನ್, ಹರೀಶ್ ಶೆಟ್ಟಿ, ಜಗನ್ನಾಥ್ ಶೆಟ್ಟಿ, ನವೀನ್ ಶೆಟ್ಟಿ , ಅಖಿಲ್ ಶೆಟ್ಟಿ, ಶಿವರಾಜ್ ಪೂಜಾರಿ, ವೀರಪ್ಪ ನೆಲ್ಲಿಗುಡ್ಡೆ, ಶಿವ ನಾಗಪ್ಪ, ಫಕ್ಕಿರೇಶ್ ಹೊಂಬಳಾಡ್, ಫಕ್ಕಿರೇಶ್ ಮಾಗಳಾಡ್, ಸುಕನ್ಯಾ ಶೆಟ್ಟಿ, ಸಾಕ್ಷಾತ್ ಶೆಟ್ಟಿ, ಉಮಾ ತೆಗ್ಗಿನ್, ಅಮ್ರಿತ್ ಶೆಟ್ಟಿ ಮತ್ತು ಅನುಪಮಾ ಅರಸ್ ಇವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದರು.

