ಮೂಡುಬಿದಿರೆ : 60ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಮೂಡುಬಿದಿರೆ ಶ್ರೀ ಮಹಾವೀರಕಾಲೇಜಿನಲ್ಲಿನಡೆದ ಮಹಾವೀರ ಫೆಸ್ಟ್ 2025- ಐ.ಕ್ಯೂ.ಎ.ಸಿ ಮತ್ತು ವಾಣಿಜ್ಯ ಸಂಘದ ಸಹಯೋಗದಲ್ಲಿ ಪದವಿಪೂರ್ವ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ,ಕಾಮರ್ಸ್ ಫೆಸ್ಟ್ನ್ನುಅಲಂಕಾರ ಗೋಲ್ಡ್ ಆಂಡ್‌ಡೈಮಂಡ್ಸ್, ಮೂಡುಬಿದರೆಯ ಮಾಲಿಕರಾದ, ಅನೂಪ್ ರೋಡ್ರಿಗ್ಸ್ ಉದ್ಘಾಟಿಸಿ,”ನಮ್ಮಿಂದ ಏನೂ ಆಗಲ್ಲ ಎಂದು ಭಾವಿಸಬಾರದು, ಆಶೆಯನ್ನು ಕಳೆದುಕೊಳ್ಳದೆ, ನಿಮ್ಮ ಕನಸುಗಳನ್ನು ಹಿಂಬಾಲಿಸಿದರೆ ಯಶಸ್ಸು ಸಾಧ್ಯ. ಒಂದು ಬಾಗಿಲು ಮುಚ್ಚಿದರೆ, ಮತ್ತೊಂದು ಹೊಸ ಬಾಗಿಲು ತೆರೆಯುತ್ತದೆ, ಎಲ್ಲರೊಂದಿಗೆ ವಿನಯದಿಂದ ನಡೆದುಕೊಳ್ಳಿ”ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾಲೇಜಿನ ಹಳೆ ವಿದ್ಯಾರ್ಥಿ, ಶ್ರೀಜಾ ಫರ್ನಿಚರ್, ಪದುಮರ್ಣಾಡು, ಮೂಡುಬಿದರೆಯ ಮಾಲಿಕರಾದ ಸೂರಜ್ ಮಾತನಾಡಿ,”ಈ ಕಾಲೇಜಿನ ಹಳೆ ವಿದ್ಯಾರ್ಥಿಎನ್ನುವುದು ನನ್ನ ಹೆಮ್ಮೆಯ ವಿಷಯ, ಈ ಕಾಲೇಜು ಕೇವಲ ವಿದ್ಯಾಭ್ಯಾಸವಲ್ಲದೆ ನನ್ನ ವೃತ್ತಿಜೀವನಕ್ಕೆ ಭದ್ರ ಭುನಾದಿಯಾಗಿದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಪ್ರತಿಭಾ ಪ್ರದರ್ಶನಕ್ಕೆ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ, ನಿಮ್ಮ ಕನಸುಗಳನ್ನು ಸಣ್ಣದೆಂದುತಿರಸ್ಕರಿಸಬೇಡಿ”ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿಕಾಲೇಜಿನ ಪ್ರಾಂಶುಪಾಲರಾದಡಾ.ರಾಧಾಕೃಷ್ಣಅಧ್ಯಕ್ಷತೆ ವಹಿಸಿ, “ ನಾವು ಸ್ಪರ್ಧಾತ್ಮಕ ಲೋಕದಲ್ಲಿ ಬದುಕುತ್ತಿದ್ದೇವೆ, ಸ್ಪರ್ಧೆಇದ್ದರೆ ಮಾತ್ರ ನಾವು ಮುನ್ನಡೆಯಲು, ಸಾಧನೆ ಮಾಡಲು ಸಾಧ್ಯ. ಇಂತಹಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರ ಹಾಕಲು ಉತ್ತಮ ವೇದಿಕೆ, ಸೋಲು ಗೆಲುವು ಎಲ್ಲಾ ಸಾಮಾನ್ಯ, ಸೋಲೆ ಗೆಲುವಿನ ಮೆಟ್ಟಿಲು. ಕಾರ್ಯಕ್ರಮದಲ್ಲಿಎಲ್ಲಾ ವಿದ್ಯಾರ್ಥಿಗಳು ಏಕಗ್ರತೆಯಿಂದ ಪಾಲ್ಗೊಳ್ಳಿ,”ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮೀ, ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಕಾರ್ಯಕ್ರಮದ ಸಂಯೋಜಕಿ ಶ್ರುತಿ ಎಸ್ ಡಾಂಗೆ, ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿ, ವಾಣಿಜ್ಯ ಸಂಘದ ಕಾರ್ಯದರ್ಶಿ ರಿತೇಶ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 16 ಕಾಲೇಜುಗಳ 320 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು.ಈ ಕಾರ್ಯಕ್ರಮವನ್ನು ವಾಣಿಜ್ಯ ವಿದ್ಯಾರ್ಥಿಗಳಾದ ಮಂದಾರ ಸ್ವಾಗತಿಸಿ, ಮುಸ್ಕಾನ ವಂದಿಸಿ, ಹರ್ಷಿಣಿ ನಿರೂಪಿಸಿದರು.

