ಬಂಟ್ವಾಳ: ನವೆಂಬರ್ 03:ಕನ್ನಡ ನಾಡು ಕನ್ನಡಿಗರಿಗೆ ಬದುಕಲು ಆಶ್ರಯ ನೀಡಿದ ಸಂಸ್ಕೃತಿಗಳ ನೆಲೆಯಾಗಿದ್ದು, ಕನ್ನಡ ಭಾಷೆ ಹಾಗೂ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನ ಯುವಜನತೆಯಿಂದ ಆಗಬೇಕು, ಆಗ ಮಾತ್ರ ಅಖಂಡ ಕರ್ನಾಟಕದ ಕನಸು ನನಸಾಗುವುದು ಎಂದು ಎಸ್.ವಿ.ಎಸ್. ಇಂಗ್ಲೀಷ್ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಚೈತ್ರಾ ಶೆಟ್ಟಿ ಹೇಳಿದರು.
ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವಕಾಲೇಜಿನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ಕಲರವ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಸುದರ್ಶನ್.ಬಿ ಮಾತನಾಡಿ, ಮನುಷ್ಯನ ವ್ಯಾವಹಾರಿಕಜೀವನಕ್ಕೆಎಲ್ಲಾ ಭಾಷೆಗಳು ಬೇಕು. ಆದರೆ ನಮ್ಮಕನ್ನಡ ಭಾಷೆಯನ್ನುಕೈಬಿಡಬಾರದು.ಎಲ್ಲಾ ಭಾಷೆಗಳನ್ನು ಗೌರವಿಸುವುದರೊಂದಿಗೆಕನ್ನಡ ಭಾಷೆಯನ್ನು ಪ್ರೀತಿಸಬೇಕುಎಂದು ತಿಳಿಸಿದರು.
ಕನ್ನಡ ಸಂಘದ ಸಂಯೋಜಕ ಶಶಿಧರ್ ಎಸ್. ಅತಿಥಿಗಣ್ಯರನ್ನು ಪರಿಚಯಿಸಿ, ವಿದ್ಯಾರ್ಥಿರಕ್ಷಿತ್ ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿನಿ ತನ್ವಿ ವಂದಿಸಿ, ರಕ್ಷಾ ಕಾರ್ಯಕ್ರಮ ನಿರೂಪಿಸಿದರು.

