ಮAಗಳೂರು:- ಮಂಗಳಾದೇವಿಯ ಶ್ರೀ ರಾಮಕೃಷ್ಣ ಮಠದಲ್ಲಿ ನಡೆಯುವ ನವಂಬರ ತಿಂಗಳ ಯೋಗ ತರಗತಿಯ ಶಿಬಿರವನ್ನು ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇಲಂಪಾಡಿ ಯೋಗ ಪ್ರತಿಷ್ಠಾನದÀ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವ ಮತ್ತು ಮುದ್ರೆಗಳ ಪ್ರಯೋಜನಗಳನ್ನು ತಿಳಿಸಿದರು. ಮಾತನಾಡುತ್ತಾ ನಮ್ಮ ಭಾರತೀಯ ಸಂಸ್ಕೃತಿಯ ಕಲೆಯಾದ ಪತಂಜಲಿ ಋಷಿ ಮಹರ್ಷಿಗಳು ತಿಳಿಸಿದ ಅಷ್ಟಾಂಗ ಯೋಗಗಳನ್ನು (ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ) ತನ್ನ ಜೀವನದಲ್ಲಿ ಅಳವಡಿಸಿಕೊಡಾಗ ಜೀವನ ಶೈಲಿಯು ಉತ್ತಮಗೊಳ್ಳುವುದು. ಆಸನಗಳು ದೈಹಿಕ, ಭಾವನಾತ್ಮಕ ಹಾಗೂ ಮಾನಸಿಕ ಪ್ರತಿಬಂಧಕಗಳನ್ನು ತೆರವು ಗೊಳಿಸಲು ಸಹಾಯಕ. ದೇಹದ ಶಕ್ತಿ ಕೇಂದ್ರಗಳನ್ನು ಜಾಗ್ರತಗೊಳಿಸಲು ಹಾಗೂ ಶಾಂತತೆಯನ್ನು ಉಂಟು ಮಾಡಲು ಸಹಾಯಕ. ಯೋಗಾಭ್ಯಾಸವು ಮಾನವನಲ್ಲಿ ಅಳತೆ ಮತ್ತು ಪ್ರಮಾಣಗಳ ವಿವೇಕ ಜ್ಞಾನವನ್ನು ಮೂಡಿಸುತ್ತದೆ. ಪ್ರತಿ ದಿನವೂ ಬಿಡದೆ, ತಾಳ್ಮೆಯನ್ನು ಕುಂದಿಸದೆ ಹುರುಪಿನಿಂದ ಈ ಯೋಗಾಭ್ಯಾಸಕ್ಕೆ ನಮ್ಮ ದೇಹವನ್ನು ಒಳಪಡಿಸಿದಲ್ಲಿ ದೇಹದೊಳಗಿನ ಪ್ರತಿಯೊಂದು ಜೀವಕೋಶವೂ ಉತ್ತಮಗೊಂಡು ತನ್ನಲ್ಲಡಗಿರುವ ಚೈತನ್ಯ ಶಕ್ತಿಯನ್ನು ಹೊರಹೊಮ್ಮಿಸಿ ಆ ಮೂಲಕ ಜೀವಿತದ ಆಶಯವನ್ನು ನೆರವೇರಿಸಿಕೊಡುತ್ತದೆ ಎಂದು ತಿಳಿಸಿದರು. ರಾಮಕೃಷ್ಣ ಮಠದಲ್ಲಿ ಹಲವಾರು ವರ್ಷಗಳಿಂದ ನಿರಂತರ ಯೋಗ ಜರುಗುತ್ತಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಸರಳ ವ್ಯಾಯಾಮ, ಸೂರ್ಯನಮಸ್ಕಾರ, ಯೋಗದ ಬಗೆಗಿನ ಮಾಹಿತಿ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ತಿಳಿಸುವುದು. ಆಸನಗಳು, ಪ್ರಾಣಾಯಾಮ, ಧ್ಯಾನ ಹಾಗೂ ಮಂತ್ರ ಮುದ್ರೆಗಳನ್ನು ತಿಳಿಸಿಕೊಡಲಾಗುವುದು. ಆರೋಗ್ಯಕರ ಜೀವನ ಶೈಲಿಗೆ ಯೋಗ ಸಹಕಾರಿ, ದೈಹಿಕ ಆರೋಗ್ಯ ಚಿತ್ತ ಶಾಂತಿಗೆ ಯೋಗ ಸಹಕಾರಿ ಎಂಬ ಮಾಹಿತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ದೇಲಂಪಾಡಿಯವರ ಶಿಷ್ಯರಾದ ಸುಮಾ, ಚಂದ್ರಹಾಸ ತುಕರಾಮ ಮತ್ತು ಪ್ರೆÃಮ ಸಹಕರಿಸಿದರು.
ಆಸಕ್ತರು ಸಂಜೆ 5.ರಿಂದ ನಡೆಸುವ ರಾಮಕೃಷ್ಣ ಮಠದ ಯೋಗ ಹಾಲ್‌ನಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಳ್ಳಬಹುದು. ಆಸಕ್ತರು ಶಿಬಿರದಲ್ಲಿ ಭಾಗವಹಿಸಲು ಮಠವನ್ನು ಸಂಪರ್ಕಿಸಿರಿ.
Home Uncategorized ದೇಹದ ಶಕ್ತಿ ಕೇಂದ್ರಗಳನ್ನು ಜಾಗ್ರತಗೊಳಿಸಲು ಹಾಗೂ ಶಾಂತತೆಯನ್ನು ಉಂಟು ಮಾಡಲು ಯೋಗ ಸಹಾಯಕ – ಯೋಗರತ್ನ...

