ಹೆಬ್ರಿಯ ಕ್ರೀಡಾ, ಸಾಂಸ್ಕೃತಿಕ ಮತ್ತು ಹೆಬ್ಬೇರಿ ಉತ್ಸವ ತಂಡವಾಗಿರುವ ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಗೆ ಪ್ರತಿಷ್ಠಿತ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಸದಸ್ಯರು ಮತ್ತು ವಿವಿಧ ಗಣ್ಯರು ಪ್ರಮುಖರು ಸೇರಿ ಸಂಭ್ರಮಾಚರಣೆ ಮಾಡಿದರು. ಹೆಬ್ರಿಯ ಬಂಟರ ಸಂಘದಿಂದ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ತನಕ ಸಂಭ್ರಮದ ಮೆರವಣಿಗೆ ನಡೆಯಿತು. ಹೆಬ್ರಿಯ ಧಾರ್ಮಿಕ ಮುಂದಾಳು ಹಿರಿಯರಾದ ಭಾಸ್ಕರ ಜೋಯಿಸ್ ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಹೆಬ್ರಿ ಶ್ರೀಅನಂತ ಪದ್ಮನಾಭ ಸನ್ನಿಧಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯ ಸಂಭ್ರಮಾಚರಣೆ ಮತ್ತು ಕೃತಜ್ಞತೆ ಸಮರ್ಪಣೆ ಸಭೆ ನಡೆಯಿತು.

ಹೆಬ್ರಿ ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿದ ರೂವಾರಿ ಶೇಖರ್ ಹೆಬ್ರಿ ಅವರ ಸೇವೆಯನ್ನು ಸರ್ವರು ಶ್ಲಾಘಿಸಿದರು. ಸಂಸ್ಥೆಗೆ ಸಹಕಾರ ನೀಡಿದ ಮುನಿಯಾಲು ಗೋಪಿನಾಥ ಭಟ್, ಬೈಕಾಡಿ ಮಂಜುನಾಥ ರಾವ್ ಶಿವಪುರ, ಮುದ್ರಾಡಿ ಮಂಜುನಾಥ ಪೂಜಾರಿ ಸಹಿತ ಹಲವರನ್ನು ಗೌರವಿಸಲಾಯಿತು. ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಆಡಳಿತ ಮೋಕ್ತೇಸರ ತಾರಾನಾಥ ಬಲ್ಲಾಳ್, ಧಾರ್ಮಿಕ ಮುಂದಾಳು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕ ಹೆಬ್ರಿ ಭಾಸ್ಕರ ಜೋಯಿಸ್ ಸಹಿತ ಗಣ್ಯರು ಹೆಬ್ರಿಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೆಬ್ರಿ ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.

ಪ್ರಮುಖರಾದ ಎಚ್. ಪ್ರವೀಣ್ ಬಲ್ಲಾಳ್, ಹೆಬ್ರಿ ಟಿ.ಜಿ.ಆಚಾರ್ಯ, ಸ್ವರ್ಣೋಧ್ಯಮಿ ನಾರಾಯಣ ಕೆ, ವಿಠ್ಠಲ ಶೆಟ್ಟಿ ಸೀತಾನದಿ, ಹರ್ಷ ಶೆಟ್ಟಿ ಹೆಬ್ರಿ, ಹೆಬ್ರಿ ಗ್ರಾಮ ಪಂಚಾಯತ್ ಸದಸ್ಯ ಎಚ್.ಜನಾರ್ಧನ್, ಕರುಣಾಕರ ಶೇರಿಗಾರ್, ಸುಧಾಕರ ಹೆಗ್ಡೆ, ರಿಕ್ಷಾ ಯೂನಿಯನ್ ಅಧ್ಯಕ್ಷ ಪ್ರಭಾಕರ ಪೂಜಾರಿ, ದೈಹಿಕ ಶಿಕ್ಷಣ ಪರೀವೀಕ್ಷಕ ನಿತ್ಯಾನಂದ ಶೆಟ್ಟಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಬ್ರಿ ಶಂಕರ ಶೇರಿಗಾರ್, ಹೆಬ್ರಿ ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಅಧ್ಯಕ್ಷೆ ಸ್ಮೀತಾ ಶೇಖರ್, ಅವಿನಾಶ ಜೋಗಿ, ಹೆಬ್ರಿಯ ವಿವಿಧ ಗಣ್ಯರು, ಪ್ರಮುಖರು, ಹೆಬ್ರಿ ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಿದ್ದರು. ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿ ಸ್ವಾಗತಿಸಿದರು.

